December 22, 2024

Bhavana Tv

Its Your Channel

ರೈತರಿಗೆ ಕಿರುಕುಳ ನೀಡುತ್ತಿದ್ದನ್ನು ಖಂಡಿಸಿ ರೈತ ಸಂಘದ ವತಿಯಿಂದ ಎಸಿಎಫ್ ಕಛೇರಿಯ ಮುಂದೆ ಪ್ರತಿಭಟನೆ

ಗುಂಡ್ಲುಪೇಟೆ .ಪಟ್ಟಣದ ಪ್ರವಾಸಿ ಮಂದಿರದಿAದ ಹೊರಟು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕಡಬೂರು ಮಂಜುನಾಥ ಮಾತನಾಡಿ ರೈತರು ಬೆಳೆದಿರುವ ತೇಗಿನಮರ ಕಟಿಂಗ್ ಆರ್ಡರ್ ಪಡೆದು ನಂಬರ್ ಹಾಕಿಸಿದರು ರವೀಂದ್ರ ರವರು ರೈತರನ್ನು ನೀವು ಮನೆಯನ್ನು ಎಲ್ಲಿ ಕಟ್ಟುತ್ತಿದ್ದೀರಿ ಮತ್ತು ಎಷ್ಟು ಅಂಕಣ ಮನೆ ಕಟ್ಟುತ್ತಿ ರೀ ಅಲ್ಲದೆ ನಿವೇಶನದ ಅಸೆಸ್ಮೆಂಟ್ ಕೊಡಿ ಎಂದು ಇಲ್ಲಸಲ್ಲದ ಕುಂಟು ನೆಪ ಗಳಿಂದ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರರವರನ್ನ ಕಡಬೂರು ಮಂಜುನಾಥ್ ತರಾಟೆಗೆ ತೆಗೆದುಕೊಂಡರು. ಅದಕ್ಕೆ ಪ್ರತಿಕ್ರಿಯೆಸಿದ ಸಹಾಯಕಅರಣ್ಯ ಅಧಿಕಾರಿಯವರು ಇನ್ನು ಮುಂದೆ ತೊಂದರೆ ಕೊಡುವುದಿಲ್ಲವೆಂದು ಮಾಧ್ಯಮದ ಮೂಲಕ ರೈತರಿಗೆ ತಿಳಿಸಿದರು ಈ ಸಂದರ್ಭದಲ್ಲಿ ರೈತ ಮುಖಂಡ ಕಡಬೂರು ಮಂಜುನಾಥ್, ಕುಂದಕೆರೆ ಸಂಪತ್ತು, ಮಾಡ್ರಳ್ಳಿ ಮಹದೇವಪ್ಪ ,ಮಹೇಶ್ ಸ್ವಾಮಿ ,ಸತೀಶ್ ,ಹೊಸೂರು ಮಹೇಶ್, ಇನ್ನು ಮುಂತಾದ ರೈತರು ಹಾಗೂ ಆರಕ್ಷಕ ಸಿಬ್ಬಂದಿ ವರ್ಗದವರು ಅರಣ್ಯ ಅಧಿಕಾರಿಗಳು ಹಾಜರಿದ್ದರು
ವರದಿ:ಸದಾನಂದ ಕನ್ನೇಗಾಲ

error: