ಗುಂಡ್ಲುಪೇಟೆ .ಪಟ್ಟಣದ ಎಂ ಡಿ ಸಿ ಸಿ ಬ್ಯಾಂಕ್ ಮುಂಭಾಗ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ ದಾಮೋದರ್ ವೀರ ಸಾವರ್ಕರ್ ರವರ ಪ್ಲೆಕ್ಸ್ ಪುಷ್ಪಾರ್ಚನೆ ಮಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ ಪ್ರಣಯ್ ನಂತರ ಮಾತನಾಡಿದ ಅವರು ಕಳೆದ 10 -15 ದಿನಗಳಿಂದ ವೀರ ಸಾವರ್ಕರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ. ಬಹಳ ಇತಿಹಾಸ ತಜ್ಞರ ರೀತಿ ಅನೇಕ ಪುಸ್ತಕ ಕಾದಂಬರಿಗಳನ್ನು ಓದಿ ತಿಳಿದವರ ರೀತಿ ಬೊಬ್ಬೆ ಹೊಡೆಯುತ್ತಿದ್ದಾರೆ. ಅಂತವರು ವಿನಾಯಕ ದಾಮೋದರ್ ವೀರ ಸಾವರ್ಕರ್ ರ ಇತಿಹಾಸ ಓದಬೇಕಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಇತಿಹಾಸದಲ್ಲಿ ಸಾವರ್ಕರ್ ಅವರು ಎರಡೆರಡು ಬಾರಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದವರು. ಅಂತಹ ಮಹಾನ್ ವ್ಯಕ್ತಿಯನ್ನು ತಮ್ಮ ಎಲುಬಿಲ್ಲದ ನಾಲಿಗೆಯಲ್ಲಿ ಮನ ಬಂದAತೆ ಹರಿದು ಬಿಡುತ್ತಿದ್ದಾರೆ ಇಂತಹ ಹೇಳಿಕೆಗಳು ಖಂಡನೀಯ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಸದಸ್ಯ ಮಹೇಂದ್ರ ,ಸುರೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್, ಪುರಸಭೆಯ ಸದಸ್ಯರುಗಳಾದ ನಾಗೇಶ್, ದೀಪು, ಸಿ ಮಹದೇವ ಪ್ರಸಾದ್, ಗ್ರಾಮ ಪಂಚಾಯತಿ ಸದಸ್ಯರಾದ ಎಚ್ ಎಂ ನಂದೀಶ್ , ಮಹೇಂದ್ರ ಗುರುವಿನ ಪುರ,ಪ್ರಸಾದ್, ಇನ್ನು ಮುಂತಾದ ಬಿಜೆಪಿಯ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.