December 22, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಅದ್ದೂರಿ ಶಿಕ್ಷಕರ ದಿನಾಚರಣೆ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿAದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರ ಮೆರವಣಿಗೆ ಹೋರಟು ಸಿ.ಎಂ.ಎಸ್. ಕಲಾಮಂದಿರಕ್ಕೆ ತಲುಪಿತು. ಕಾರ್ಯಕ್ರಮಕ್ಕೇ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮುಖ್ಯ ಭಾಷಣಕಾರರಾಗಿ ಡಿ.ಎಸ್ ಸದಾಶಿವಮೂರ್ತಿ ರವರು ಮಾತನಾಡಿ ಇಂದು ಪವಿತ್ರವಾದ ದಿನ ಶಿಕ್ಷಕರ ದಿನಾಚರಣೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ ಜನ್ಮ ದಿನಾಚರಣೆ ಅವರ ಆದರ್ಶಗಳನ್ನು ನಾವು ನೀವು ಎಲ್ಲಾ ಪಾಲೀಸೋಣ ಮತ್ತು ಅವರನ್ನು ಸ್ಮರಿಸೋಣ ಎಂದು ತಿಳಿಸಿದರ ಮೂಲಕ ಇಂದಿನ ಸಮಾಜದಲ್ಲಿ ಶಿಕ್ಷಕಿಯರು ಮತ್ತು ಶಿಕ್ಷಕರ ಜವಾಬ್ದಾರಿಯನ್ನು ಮತ್ತು ಅವರು ಸಮಾಜದಲ್ಲಿ ಹೇಗಿರಬೇಕು ಎಂಬುದನ್ನು ಸವಿಸ್ತಾರವಾಗಿ ಈ ಸಂದರ್ಭದಲ್ಲಿ ತಿಳಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದೇ ಸಂದರ್ಭದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್, ಪುರಸಭೆ ಅಧ್ಯಕ್ಷರಾದ ಪೀ. ಗಿರೀಶ್, ಪುರಸಭೆ ಸದಸ್ಯರುಗಳಾದ ನಾಗೇಶ್, ಶಶಿಧರ್, ಎಪಿಎಂಸಿ ಶಿವಪ್ರಸಾದ್, ನಾಗರಾಜ ಪ್ಪ, ತಾಲೂಕು ದಂಡಾಧಿಕಾರಿ ಸಿಜಿ ರವಿಶಂಕರ್ ,ಬಿ. ಇ ಓ ಶಿವಮೂರ್ತಿ, ಇ .ಒ.ಶ್ರೀಕಂಠ ರಾಜ್ ಅರ ಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ, ಮತ್ತು ತಾಲೂಕು ಪ್ರೌಢಶಾಲಾ ಶಾಸಕರ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಂಕಪ್ಪ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬರುವ ಎಲ್ಲಾ ಸಂಘಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: