December 22, 2024

Bhavana Tv

Its Your Channel

ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ

ಗುಂಡ್ಲುಪೇಟೆ ಪಟ್ಟಣದ ಕುಂಬಾರರ ಸಮುದಾಯ ಭವನದಲ್ಲಿ ನಡೆದ ಬೃಹತ್ ಉಚಿತ ಕಣ್ಣಿನ ಶಿಬಿರವನ್ನು ಕುಂಬಾರರ ಸಮುದಾಯ ದ ರಾಜ್ಯ ಅಧ್ಯಕ್ಷರಾದ ಶಿವಕುಮಾರ್ ಚೌವಡ ಶೆಟ್ಟಿ ಯವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು ನಂತರ ಮಾತನಾಡಿದವರು ನಮ್ಮ ಸಮುದಾಯದವರು ಈ ರೀತಿ ದೊಡ್ಡದಾದ ಒಂದು ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ನಮಗೆ ಸಂತೋಷ ತಂದಿದೆ ನಮ್ಮ ಸಮಾಜದವರು ಈ ರೀತಿ ಸಮಾಜದ ಬಗ್ಗೆ ಕಾಳಜಿ ವಹಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಅಲ್ಲದೆ ಸಮುದಾಯ ಭವನ ಉದ್ಘಾಟನೆಯಾಗಿ ಒಂದು ತಿಂಗಳು ಕಳೆದಿದೆ ಅಷ್ಟೇ ಅದರ ಮುಂದುವರಿದ ಭಾಗವಾಗಿ ಈ ಒಂದು ಬೃಹತ್ ಕಣ್ಣಿನ ತಪಾಸಣಾ ಶಿಬಿರವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಎಂದರು

ಈ ಸಂದರ್ಭದಲ್ಲಿ ಶ್ರೀಮತಿ ಸಿ ರೇಣುಕಾಂಬ, ದಂಡಾಧಿಕಾರಿಗಳಾದ ಸಿ .ಜಿ . ರವಿಶಂಕರ್, ಮಹಾದೇವ ಶೆಟ್ಟಿ, ತಾಲೂಕು ಕುಂಬಾರ ಸಂಘದ ಅಧ್ಯಕ್ಷರಾದ ಪಿ. ವೆಂಕಟರಾಜು, ಉಪಾಧ್ಯಕ್ಷರುಗಳಾದ ಕೊಂಗಳ್ ಶೆಟ್ಟರು, ತಮ್ಮಣ್ಣ ಹನುಮಂತ ಶೆಟ್ಟಿ, ಸಂಪತ್ತು , ಹಾಗೂ ತಾಲೂಕು ಕುಂಬಾರ ಸಂಘದ ಎಲ್ಲಾ ಪದಾಧಿಕಾರಿಗಳು ಮುಖಂಡರುಗಳು ಯುವಕರುಗಳು ಸಾರ್ವಜನಿಕರು ಮತ್ತು ಅರವಿಂದ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: