ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ (ಗಣಪತಿ ಸ್ಕೂಲ್) ಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಶಾಲಾ ಮಕ್ಕಳಲ್ಲಿ ಕಲಿಕೆಯಲ್ಲಿ ಪ್ರೀತಿ ಹುಟ್ಟಿಸುವ ದೃಷ್ಟಿಯಿಂದ’ ಕನ್ನಡ ಭಾಷಾ ಜ್ಞಾನ ಪ್ರಸಾರ” ಎಂಬ ಪುಸ್ತಕವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ವತಿಯಿಂದ ವಿತರಿಸಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶೈಲಕುಮಾರ್ ಮಾತನಾಡಿ ನಾನು ಈ ಶಾಲೆಯಲ್ಲಿ 1975 ರಿಂದ 1981-82 ರವರೆಗೆ ಓದಿದ ವಿದ್ಯಾರ್ಥಿ. ಅಂದು ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದು ಒಂದೊAದು ತರಗತಿಯಲ್ಲೂ 40-50 ವಿದ್ಯಾರ್ಥಿಗಳು ಇದ್ದರು ಇಂದು ಈ ಶಾಲೆ ಶತಮಾನೋತ್ಸವ ಆಚರಿಸುವ ಹೊತ್ತಿನಲ್ಲಿ ಇಡೀ ಶಾಲೆಯ ಸಂಖ್ಯೆ ಕೇವಲ 57 .ಹೀಗೆ ಮುಂದುವರಿದರೆ ಕನ್ನಡ ಶಾಲೆಗಳು ಅಳಿದು ಹೋಗಲಿವೆ. ಇಲ್ಲಿಯ ವರೆಗೆ ಓದಿದ ಹಳೆಯ ವಿದ್ಯಾರ್ಥಿಗಳು ಊರಿನ ಗಣ್ಯರು, ಶಾಸಕರು, ಬಿಇಓ ಸಾಹೇಬರುಗಳೊಂದಿಗೆ ಮಾತನಾಡಿ ಕಸಾಪ ಈ ಶಾಲೆಯನ್ನು ದತ್ತು ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ಕನಿಷ್ಠ ನೂರು ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿರಲು ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರಾದ ಸರೋಜಮ್ಮ, ಸಹ ಶಿಕ್ಷಕಿಯರಾದ ವೀಣಾ ದೈಹಿಕ ಶಿಕ್ಷಕರಾದ ದಾಕ್ಷಾಯಿಣಿ, ಗೌರಮ್ಮ, ಹಿರಿಯ ಹೋರಾಟಗಾರರ ಬ್ರಹ್ಮಾನಂದ, ಕರ್ನಾಟಕಕಾವಲು ಪಡೆ ಅಧ್ಯಕ್ಷರಾದ ತಾಲೂಕುಅಬ್ದುಲ್ ಮಾಲೀಕ್, ಮುಬಾರಕ್ ಉಪಸ್ಥಿತರಿದ್ದರು.
ವರದಿ ; ಸದಾನ0ದ ಕನ್ನೆಗಾಲ, ಗುಂಡ್ಲಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.