December 20, 2024

Bhavana Tv

Its Your Channel

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2021 2022ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾದ ಎಂಪಿ ಸುನಿಲ್ ರವರು ಮಾತನಾಡಿ ನಮ್ಮ ಬ್ಯಾಂಕ್ ಈಗಾಗಲೇ ಈ ಸಹಕಾರ ಸಂಘಕ್ಕೆ ರೈತರಿಗೆ ಒಂದು ಕೋಟಿ 46. ಲಕ್ಷ ಎಂ.ಟಿ .ಎಲ್. ಮತ್ತು ಕೆ.ಸಿ.ಸಿ.ಬೆಳೆ ಸಾಲವನ್ನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀಡಿದ್ದೇವೆ .

ಅಲ್ಲದೆ 3 ಮಹಿಳಾ ಸಂಘಕ್ಕೆ 13 ಲಕ್ಷ ಕೊಟ್ಟಿದ್ದೇವೆ ಇನ್ನು ಎರಡು ಸಂಘಗಳಿಗೆ ಬಾಕಿ ಇದೆ. ಒಂದು ಟ್ರ‍್ಯಾಕ್ಟರ್ ಸಹ ನೀಡಿದ್ದೇವೆ. ಹಾಗಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತವೆ ಅದನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗುರುಮಲ್ಲಪ್ಪ ಉಪಾಧ್ಯಕ್ಷರಾದ ಜಿಎಂ ಶಿವಕುಮಾರ್ ಹಾಗೂ ನಿರ್ದೇಶಕರುಗಳು ಮತ್ತು ಸಂಘದ ಮುಖ್ಯ ಕಾರ್ಯನಿರ್ವಹನಾಧಿಕಾರಿ ಜಿಎಸ್ ನಾಗೇಂದ್ರ ಹಾಗೂ ಸಂಘದ ಸರ್ವ ಸದಸ್ಯರುಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: