December 21, 2024

Bhavana Tv

Its Your Channel

ಕಂದಾಯ ಇಲಾಖೆ ವತಿಯಿಂದ 94ಸಿ ಅಡಿಯಲ್ಲಿಸಾಗುವಳಿ ಚೀಟಿ ವಿತರಣೆ

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ವತಿಯಿಂದ 94 ಸಿ ಅಡಿಯಲ್ಲಿ ರೈತರಿಗೆ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮವನ್ನು ಶಾಸಕರಾದ ಸಿ ಎಸ್ ನಿರ0ಜನ್ ಕುಮಾರ್ ಅವರು ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ 94ಸಿ ಅಡಿಯಲ್ಲಿ ಹಲವು ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ರೈತರ ಕುಟುಂಬಕ್ಕೆ ಇಂದು ಸಾಗುವಳಿ ಚೀಟಿ ನೀಡುವ ಮೂಲಕ ಆ ಜಮೀನಿಗೆ ರೈತನೇ ಮಾಲೀಕನಾಗಿ ಮಾಡಲಾಗಿದೆ. ಸ್ವಾವಲಂಬಿ ಜೀವನ ನಡೆಸಲು ಇದು ಮಹತ್ತರ ಹೆಜ್ಜೆ ಆಗಿದೆ. ಅಲ್ಲದೆ ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿಕೊಂಡು ಹೋದಲ್ಲಿ ಕಾರ್ಯಕ್ರಮಕ್ಕೆ ಅರ್ಥ ಬರುತ್ತೆ ಇಂದು ನೀವು ಪಡೆದಿರುವ ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರ ಗಳು ನಿಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕೆ ಇದು ನಿಮ್ಮ ಸೊತ್ತಾಗಿರುತ್ತದೆ ಎಂದರು .

ರೈತ ಸಾಗುವಳಿ ಚೀಟಿ ಪಡೆದ ಮಹಿಳೆಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ. ಬಗರ್ ಹುಕಂ ಸಾಗುವಳಿಯ ಸದಸ್ಯರಾದ ನಿಟ್ರೆನಾಗರಾಜಪ್ಪ, ಹೊರೆಯಲ ಮಹೇಶ್ , ಪಿ.ಗಿರೀಶ್, ದೀಪಿಕಾ ಅಶ್ವಿನ್, ನಾಗೇಶ್, ಕಮರಹಳ್ಳಿ ರವಿ, ತಾಲೂಕು ದಂಡಾಧಿಕಾರಿ ಸಿ ಜಿ ರವಿಶಂಕರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ರೈತಾಪಿ ವರ್ಗದ ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: