December 22, 2024

Bhavana Tv

Its Your Channel

ಉಡುಪಿಯಿಂದ ತನ್ನ ಊರಿನತ್ತ ನಡೆದುಕೊಂಡು ಸಾಗುತ್ತಿದ್ದ ಉತ್ತರಪ್ರದೇಶದ ಕಾರ್ಮಿಕರಿಗೆ ನೆರವಿಗೆ ಧಾವಿಸಿದ ಎಸ್.ಆರ್.ಎಲ್. ಟಾವೆಲ್ಸ

ಹೊನ್ನಾವರ: ಜಿಲ್ಲೆಯಲ್ಲಿ ಅತಿ ದೊಡ್ಡದಾದ ಸಾರಿಗೆ ಉದ್ಯಮದ ಮೂಲಕ ಚಿರಪರಿಚಿತವಾದ ಎಸ್.ಆರ್.ಟಾವೆಲ್ಸ ಹಲವು ವಿಧದಲ್ಲಿ ಸಾರ್ವಜನಿಕರಿಗೆ ನೆರವಾಗುತ್ತಿದೆ. ಮಾಲಕರಾದ ವೆಂಕ್ರಟಮಣ ಹೆಗಡೆ(ಪುಟ್ಟ ಹೆಗಡೆ) ಕರೋನಾ ಸಂಕಷ್ಟದ ಸಮಯದಲ್ಲಿ ದಿನಸಿ ಕಿಟ್ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿದ್ದರು. ಇಂದು ಉಡುಪಿಯ ಫ್ಯಾಕರಿಯಿಂದ ಉತ್ತರಪ್ರದೇಶದ ರಾಜ್ಯಕ್ಕೆ ತೆರಳಲು ನಡೆದುಕೊಂಡು ಬರುತ್ತಿದ್ದರು. ತಮ್ಮ ಕಛೇರಿಯ ಮುಂಭಾಗದಲ್ಲಿ ಇದನ್ನು ಗಮನಿಸಿ ತನ್ನ ಸಿಬ್ಬಂದಿವರ್ಗದ ಸಹಕಾರದ ಮೇರೆಗೆ ವೆಂಕ್ರಟಮಣ ಹೆಗಡೆ ಎಲ್ಲರಿಗೂ ಲಘು ಉಪಾಹಾರ, ಕುಡಿಯುವ ನೀರು ಒದಗಿಸಿರುದಲ್ಲದೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಂತ ಖರ್ಚಿನಲ್ಲಿ ಖಾಸಗಿ ವಾಹನದ ಮೂಲಕ ಹುಬ್ಬಳ್ಳಿಯವರೆಗೆ ತಲುಪಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಶ್ರೀಕುಮಾರ ಸಂಸ್ಥೆಯ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

error: