December 22, 2024

Bhavana Tv

Its Your Channel

ಲಾಕ್ ಡೌನ ಉಲ್ಲಂಘನೆ: ಭಟ್ಕಳದಲ್ಲಿ ಇಲ್ಲಿಯ ತನಕ 20 ಪ್ರಕರಣ ದಾಖಲು’

ದನದ ಮಾಂಸ ಸಾಗಾಟ, ಗುಂಪು ಸೇರಿ ನಮಾಜ್ ಮಾಡಿದವರ ಮೇಲೆ ಮುಲಾಜಿಲ್ಲದೇ ಕೇಸ್’

ಭಟ್ಕಳ: ಕಾರಣವಿಲ್ಲದೇ ವಾಹನದಲ್ಲಿ ರಸ್ತೆಗಿಳಿದು ಲಾಕ್ ಡೌನ ಕಪ್ರ್ಯೂ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸರು ಲಾಕ್ ಡೌನ ಘೋಷಣೆಯಿಂದ ಇಲ್ಲಿಯ ತನಕ ಕಾರ್ಯಾಚರಣೆ ಮಾಡಿದ್ದು ಒಟ್ಟು 20 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ನಗರ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗ-1 ಪಿಎಸೈ ಭರತ ನಾಯಕ್ ತಿಳಿಸಿದರು.
ಅವರು ಇಲ್ಲಿನ ನಗರ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
‘ಪಟ್ಟಣ ವ್ಯಾಪ್ತಿಯ ಖಲೀಪಾ ಸ್ಟ್ರೀಟ್ ಬಳಿಯ ಸ್ಪೋಟ್ಸ ಸೆಂಟರವೊಂದರ ಕಟ್ಟಡ ಮೇಲುಗಡೆ ಗುಂಪು ಸೇರಿ ನಮಾಜ್ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿದ್ದು, ಸಿದ್ದೀಕ್ ಸ್ಟ್ರೀಟ್ ಬಳಿ ಅಂದಾಜು 45 ಸಾವಿರ ರೂ. ಮೌಲ್ಯದ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರ ಮೇಲು ಸಹ ಪ್ರಕರಣ ದಾಖಲಿಸಲಾಗಿದೆ ಎಂದ ಅವರು ಅನಾವಶ್ಯಕ ವಾಹನದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದವರ ಮೇಲೆ ಪ್ರಕರಣ ಹಾಕಲಾಗಿದ್ದು ನಗರ ವಿವಿಧ ಭಾಗದಲ್ಲಿ ಡಿವೈಎಸ್.ಪಿ. ನಗರ ಹಾಗೂ ಗ್ರಾಮೀಣ ಠಾಣೆ ಪಿಎಸೈ, ಎಎಸೈ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಗಿಳಿದಿದ್ದರು.
ಈಗಾಗಲೇ ಪಟ್ಟಣದ ಕೋರೋನಾ ಹಾಟ್ ಸ್ಪಾಟ್‍ಗಳಲ್ಲಿ ತುರ್ತು ಆರೋಗ್ಯ ಹೆಲ್ಪ ಡೆಸ್ಕ ಸ್ಥಾಪನೆ ಮಾಡಲಾಗಿದ್ದು ಈ ಮೂಲಕ ಅಲ್ಲಿನ ಜನರಿಗೆ ಅನೂಕೂಲವಾಗುವಂತೆ ಪೊಲೀಸ ಇಲಾಖೆಯೇ ಪಾಸ ವಿತರಣೆಯಲ್ಲಿಯೇ ಜನರಿಗೆ ದಿನಸಿ, ತರಕಾರಿ, ಹಣ್ಣುಗಳ ಪೂರೈಕೆ ನಡೆಸುತ್ತಿದ್ದೇವೆ. ಈ ಹಿಂದೆ ಪಾಸಗಳನ್ನು ನಕಲು ಮಾಡಿ ಹೋಗುವ ಅವಕಾಶವನ್ನು ಈ ಬಾರಿ ಪೊಲೀಸ ಇಲಾಖೆಯಿಂದ ತಪ್ಪಿಸಿದ್ದೇವೆ. ಅವಶ್ಯಕತೆಗೆ ಮೀರಿ ಯಾರಿಗೂ ಸಹ ಪಾಸ್ ನೀಡುತ್ತಿಲ್ಲವಾಗಿದ್ದು ಇದರಿಂದ ವಾಹನ ಸಂಚಾರವೂ ಕಡಿಮೆಯಾಗಿದೆ ಎಂದ ಅವರು ವಾಹನ ತಂದು ಜಪ್ತಿ ಮಾಡುತ್ತಿದ್ದರು ಸಹ ಜನರಲ್ಲಿ ಪೊಲೀಸ್ ಇಲಾಖೆಯ ಶ್ರಮ ಮಾತ್ರ ಅರ್ಥವಾಗುತ್ತಿಲ್ಲ ಎಂದರು.
‘ಕೋರೋನಾದಿಂದ ಜನರ ಪ್ರಾಣ ಉಳಿಸಲು ಇಲಾಖೆ, ತಾಲೂಕಾಢಳಿತ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನರು ಮನೆಯಲ್ಲಿಯೇ ಇದ್ದರೆ ಯಾವುದೇ ಪ್ರಕರಣ ಹಾಕುವ ಅವಶ್ಯಕತೆ ನಮಗೆ ಬರುವಿದಿಲ್ಲ. ಕಳೆದ ಎರಡು ತಿಂಗಳಿನಿಂದ ತಾಲೂಕಿನ ಪೊಲೀಸರು ರಜೆಯಿಲ್ಲದೇ ಎರಡು ಹೊತ್ತು ಹಗಲುರಾತ್ರಿ ಕೆಲಸ ಮಾಡಿದ್ದು ಅದರಲ್ಲು ಕೆಲವು ಸೂಕ್ಷ್ಮ ಪ್ರದೇಶದಲ್ಲಿಯೂ ಭದ್ರತೆಯನ್ನು ಹಾಕಲಾಗಿದೆ. ಸದ್ಯ ಭಟ್ಕಳದಲ್ಲಿ ಮೂರ್ನಾಲ್ಕು ದಿನದಿಂದ ಯಾವುದೇ ಕೋರೋನಾ ಪ್ರಕರಣವಿಲ್ಲದೇ ಭಟ್ಕಳ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದ್ದು ಇನ್ನೇನಾದರು ಪ್ರಕರಣ ಬಂದಿದ್ದಲ್ಲಿ ಇನ್ನಷ್ಟು ದಿನಗಳಲ್ಲಿ ಲಾಕ್ ಡೌನ ಮುಂದುಡಲಿದೆ.
ಈ ಸಂಧರ್ಭದಲ್ಲಿ ನಗರ ಠಾಣೆ ಸಿಬ್ಬಂದಿಗಳು ಇದ್ದರು.

error: