July 11, 2024

Bhavana Tv

Its Your Channel

ಪಿಎಲ್‌ಡಿ ಬ್ಯಾಂಕ್ ವತಿಯಿಂದ ಪಿಗ್ಮಿ ಸಂಗ್ರಾಹಕರಿಗೆ ಡಿ.ದರ್ಜೆ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಣೆ.

ಹೊನ್ನಾವರ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಪ್ರಧಾನ ಶಾಖೆ ಹಾಗೂ ವಿವಿಧ ಬ್ರಾಂಚ್‌ಗಳಲ್ಲಿ ಕಾರ್ಯ ನಿರ್ವಹಿಸುವ ಪಿಗ್ಮಿ ಸಂಗ್ರಾಹಕರು ಮತ್ತು ಡಿ.ದರ್ಜೆ ನೌಕರರಿಗೆ ದಿನಸಿ ಕಿಟ್ ಪ್ರಧಾನ ಕಛೇರಿಯಲ್ಲಿ ಬ್ಯಾಂಕ್ ಶನಿವಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷರಾದ ವಿ.ಎನ್.ಭಟ್ ಅಳ್ಳಂಕಿ ಮಾತನಾಡಿ ಕರೋನಾ ಸಂಕಷ್ಟದ ಸಮಯದಲ್ಲಿ ಹಣಕಾಸು ವ್ಯವಹಾರಗಳು ಕಷ್ಟದಾಯಕವಾಗಿದೆ. ಆದರೆ ತಮ್ಮ ಪ್ರಾಣವನ್ನು ಪಣಕಿಟ್ಟು ಹಣಕಾಸಿನ ವ್ಯವಹಾರವನ್ನು ನಮ್ಮ ಸಿಬ್ಬಂದಿಗಳು ನಿಭಾಯಿಸುತ್ತಿದ್ದಾರೆ. ಅದರಲ್ಲಿಯೂ ಪ್ರತಿ ಅಂಗಡಿಗಳಿಗೆ ತೆರಳಿ ಪಿಗ್ಮಿಸಂಗ್ರಹಣೆ ಮಾಡುವವರು ಕರೋನಾ ಸಮಯದಲ್ಲಿ ಸಂಕಷ್ಟದಲ್ಲಿರುದರಿoದ ಅವರಿಗೆ ನೆರವಾಗುವ ದೃಷ್ಟಿಯಿಂದ ನಮ್ಮ ಬ್ಯಾಂಕ್‌ವತಿಯಿoದ ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ಕರೋನಾವನ್ನು ಎಲ್ಲರೂ ಒಂದಾಗಿ ತಡೆಯೋಣ, ಬ್ಯಾಂಕ್ ಸದಾ ಕಾಲ ರೈತರ ಜೊತೆಗೆ ಇರಲಿದೆ ಎಂದರು.
ಈ ಸಂದರ್ಬದಲ್ಲಿ ನಿರ್ದೆಶಕರಾದ ಕೃಷ್ಣ ಜೆ.ಗೌಡ, ರವಿ ಶೆಟ್ಟಿ ಕವಲಕ್ಕಿ, ಗೋವಿಂದ ನಾಯ್ಕ, ಯೋಗೇಶ ರಾಯ್ಕರ, ರಾಜೇಂದ್ರ ನಾಯ್ಕ, ರಾಜು ನಾಯ್ಕ ಮಂಕಿ, ವಜ್ರನಾಭ ಗೌಡ, ಭಾಗೀರಥಿ ಗೊಂಡ, ವಾಸಂತಿ ನಾಯ್ಕ, ಮಂಗಲಾ ಮೇಸ್ತ ಮ್ಯಾನೇಜರ್ ಪಿ.ಎನ್.ಭಟ್ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: