September 17, 2024

Bhavana Tv

Its Your Channel

ಬೈಲುರು ಸಮೀಪದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ವಿಕ್ಷಿಸಿದ ಶಾಸಕ ಸುನೀಲ ನಾಯ್ಕ.

ಭಟ್ಕಳ: ತಾಲೂಕಿನ ಬೈಲೂರ್ ಗ್ರಾಮ ಪಂಚಾಯತ್ ದೊಡ್ಡ್ ಬಲಸೇ ಮಜಿರೆಯ ಸುಗ್ಗಿ ಹೊಳೆಗೆ ೨೫ ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸೈಡ್ ಪಿಚ್ಚಿಂಗ್ ನಿರ್ಮಾಣ ಮತ್ತು ಒಂದು ಕಿಲೋಮೀಟರ್ ಹೊಳೆಯ ಎರಡು ಕಡೆ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿತ್ತು. ಈ ಕಾಮಗಾರಿಯ ನಡೆಯುತ್ತಿರುವ ಸ್ಥಖಳಕ್ಕೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲಿಸನೆ ನಡೆಸಿದರು. ನಂತರ ಮಾತನಾಡಿ ಈ ಭಾಗದ ಬಹು ವರುಷದ ಬೇಡಿಕೆ ಇದಾಗಿದ್ದು, ಈ ಯೋಜನೆ ಪೂರ್ಣಗೊಂಡಾಗ ರೈತರ ಮೊಗದಲಿ ಅತಿ ಹೆಚ್ಚು ಸಹಕಾರಿಯಾಗಲಿದೆ. ಕಾಮಗಾರಿ ಕೇಲವೇ ದಿನದಲ್ಲಿ ಮುಗಿಯಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

error: