ಮಂಡ್ಯ- ಜಿಲ್ಲೆಯ ಗುಡಿಬಂಡೆ ಪಟ್ಟಣದ ೧೧ ನೇ ವಾರ್ಡ್ ನಲ್ಲಿ ವಾಸವಿರುವ ಆನಂದ್ ಮತ್ತು ಪ್ರಭಾವತಿಯವರ ವಿವಾಹ ವಾರ್ಷಿಕೊತ್ಸವದ ಅಂಗವಾಗಿ ಗಿಡ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ವಿವಾಹ ವಾರ್ಷಿಕೊತ್ಸವ ಆಚರಿಸಿಕೊಂಡರು. ಅಲ್ಲದೇ ಪಟ್ಟಣದ ಕೆಲ ಬಡವರಿಗೆ ಸೋಪ್, ಮತ್ತು ಸಿಹಿ ನೀಡುವ ಮೂಲಕ ಆಚರಿಸಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಿ. ಹನುಮಂತರಾಯಪ್ಪನವರ ಮಾತನಾಡಿ ಗಿಡನೆಡುವುದು ಉತ್ತಮ ಕಾರ್ಯವಾಗಿದೆ. ವಿವಾಹ ವಾರ್ಷೀಕೊತ್ಸವ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ವಾರ್ಡನ್ನು ಹಸಿರುಮಯ ಮಾಡುವುದೇ ನಮ್ಮ ಗುಡಿಬಂಡೆ ಸಾರ್ವಜನಿಕರ ಗುರಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಡಿಬಂಡೆ ಆರೋಗ್ಯಧಿಕಾರಿಗಳಾದ ಡಾ .ನರಸಿಂಹಮೂರ್ತಿ ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ. ಗುಂಪುಮರದ ಆನಂದ್,ಕನ್ನಡ ಸೇನೆಯ ಅಧ್ಯಕ್ಷರಾದ ಅಂಬರೀಶ್ ,ಪತ್ರಿಕೆ ವರದಿಗಾರ ಜಿವಿ,ಶ್ರೀನಾಥ್, ಶಿಕ್ಷಕರಾದ ರಾಮಪ್ಪ,.ರಾಮಂಜನೇಯ,ಸ0ತೋಷ ವೈದ್ಯರಾದ ವೆಂಕಟೇಶ್,ಹಾಗೂ ಭಾರ್ಗವ, ವಿಕಾಸ್, ಸೋಮು,ಇನ್ನೂ ಮುಂತಾದವರು ಭಾಗವಹಿಸಿದ್ದರು
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ