April 1, 2023

Bhavana Tv

Its Your Channel

ಡಿ.ಕೆ.ಶಿ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ವಿತರಣೆ

ಮಂಡ್ಯ; ಜಿಲ್ಲೆಯ ಗುಡಿಬಂಡೆಯಲ್ಲಿ ಶಾಸಕರಾದ ಎಸ್.ಎನ್ ಸುಬ್ಬಾರೆಡ್ಡಿ ರವರ ಮಾರ್ಗದರ್ಶನದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ೫೮ ನೇ ಹುಟ್ಟುಹಬ್ಬವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವುದರ ಮುಖಾಂತರ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ. ಗುಂಪುಮರದ ಆನಂದ್, ಗುಡಿಬಂಡೆ ತಾಲೂಕು ಕಾಂಗ್ರೆಸ್ ಯೂತ್ ಅಧ್ಯಕ್ಷರು ರಮೇಶ್, ಪಿ ಏಲ್.ಡಿ ಬ್ಯಾಂಕ್ ಉಪಾಧ್ಯಕ್ಷರು ಪ್ರಕಾಶ್,ಆನಂದ್‌ರೆಡ್ಡಿ, ರಮೇಶ್ ಬಾಬು, ಶ್ರೀನಿವಾಸ್‌ಗಾಂಧಿ,ಮ0ಜುನಾಥ್ ರೆಡ್ಡಿ, ಬಾಬಾಜನ, ನಾಗರಾಜ್.ಮಧು, ಚನ್ನಕೃಷ್ಣಾರೆಡ್ಡಿ ಮುಂತಾದವರು ಇದ್ದರು

About Post Author

error: