ಹೊನ್ನಾವರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ ತಾಲೂಕಿಗೆ ಸೀಮಿತವಾಗಿದ್ದ ಕರೋನಾ ಮುಂಬೈ ರತ್ನಗಿರಿ ಆಗಮಿಸಿದ ವ್ಯಕ್ತಿಯಿಂದ ಕುಮುಟಾ ತಾಲೂಕಿಗೆ ಬಂದಿತ್ತು. ಭಟ್ಕಳ ಕುಮುಟಾ ಮಧ್ಯೆ ಇರುವ ಹೊನ್ನಾವರದ ಜನತೆ ಆತಂಕದ ಮಧ್ಯೆ ತಮ್ಮ ದೈನಂದಿನ ವ್ಯವಹಾರದಲ್ಲಿ ತೊಡಗಿದ್ದರು. ಮೂರನೇ ಹಂತದ ಲಾಕ್ ಡೌನ್ ರವಿವಾರ ಅಂತ್ಯವಾದ ಬಳಿಕ ಸೋಮವಾರ ನಾಲ್ಕನೇ ಹಂತದ ಲಾಕ್ ಡೌನ್ ಪ್ರಥಮ ದಿನಕ್ಕೆ ಸಜ್ಜಾಗುತ್ತಿದ್ದರು. ಈ ನಡುವೆ ರವಿವಾರ ಇಡೀ ಜಿಲ್ಲೆಯನ್ನು ಬೆಚ್ಚಿ ಬಿಳಿಸುವ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು ತಾಲೂಕಿನವರೆ ಆದ ಒಂದೇ ಕುಟುಂಬದ ನಾಲ್ವರು ಮಹಾರಾಷ್ಟದಿಂದ ಕಳೆದ ೫ ರಿಂದ ೬ ದಿನದ ಹಿಂದೆ ತಾಲೂಕಿಗೆ ಆಗಮಿಸಿದ್ದರು. ಅಧಿಕಾರಿಗಳು ಇವರನ್ನು ಸರ್ಕಾರಿ ಕ್ವಾರಂಟೈನನಲ್ಲಿ ಇಡುವ ಮೂಲಕ ಎಚ್ಚರಿಕೆವಹಿಸಿದ್ದರು. ಇದೀಗ ಇವರ ಪರಿಕ್ಷಾ ವರದಿಯಲ್ಲಿ ಪಾಸಟಿವ್ ? ಬಂದಿದೆ ಎನ್ನಲಾಗುತ್ತಿದ್ದು, ಸೋಮವಾರ ಮಧ್ಯಾಹ್ನ ಹೆಲ್ತ ಬುಲೆಟಿನ್ ದೃಡವಾಗಲಿದೆ. ಜಿಲ್ಲೆಯ ಮುಂಡಗೋಡ ೨, ಮುರ್ಡೆಶ್ವರ ೧ ಕ್ವಾರಂಟೈನಲ್ಲಿ ಇರುವವರಿಗೆ ಕರೊನಾ ಪಾಸಟಿವ್ ದೃಡ ಎನ್ನಲಾಗುತ್ತಿದ್ದು ಇದು ಕೂಡಾ ಇಂದು ದೃಡಗೊಳ್ಳಲಿದೆ ?.
ಹೊನ್ನಾವರ ಪಟ್ಟಣದ ಪ್ರಭಾತನಗರ ಸೀಲ್ ಡೌನ್ ಮಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಸಜ್ಜಾಗಿ ರಾತ್ರಿಯೆ ಬ್ಯಾರಿಕೇಟ್ ಅಳವಡಿಸಲಾಗುತ್ತಿದೆ.
ಇನ್ನೊಂದಡೆ ಪಟ್ಟಣಕ್ಕೆಇಂದು ಜಿಲ್ಲಾಧಿಕಾರಿ ಹರೀಶ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುದಲ್ಲದೇ ಈ ಹಿಂದೆ ಭಟ್ಕಳದಲ್ಲಿ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ಇಲ್ಲಿಯೂ ಅನುಷ್ಟಾನ ಮಾಡುವ ಸಾಧ್ಯತೆ ಇದೆ.
Best&suooooper