April 1, 2023

Bhavana Tv

Its Your Channel

ಶರಾವತಿ ತೀರಕ್ಕೂ ಆತಂಕವೊಡ್ಡಿದ ಕರೋನಾ. ಹೊನ್ನಾವರಕ್ಕೆ ಬಿಗ್ ಶಾಕ್, ಹೊನ್ನಾವರ ೪,

ಹೊನ್ನಾವರ: ಸೋಮವಾರ ಇಡೀ ಜಿಲ್ಲೆಯನ್ನು ಬೆಚ್ಚಿ ಬಿಳಿಸುವ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು ಹೊನ್ನಾವರ ಕ್ವಾರಂಟೈನ್‌ಲ್ಲಿ ಇದ್ದ ಒಂದೇ ಕುಟುಂಬದ ನಾಲ್ವರಿಗೆ ಕೋರೋನಾ ಪಾಸಿಟಿವ್ ಇರುವುದು ಹೆಲ್ತ ಬುಲೆಟಿನ್ ದೃಡಪಡಿಸಿದೆ.
ಮಹಾರಾಷ್ಟದಿಂದ ಕಳೆದ ೫ ರಿಂದ ೬ ದಿನದ ಹಿಂದೆ ಹೊನ್ನಾವರ ತಾಲೂಕಿಗೆ ಆಗಮಿಸಿದ್ದರು. ಅಧಿಕಾರಿಗಳು ಇವರನ್ನು ಸರ್ಕಾರಿ ಕ್ವಾರಂಟೈನನಲ್ಲಿ ಇಡುವ ಮೂಲಕ ಎಚ್ಚರಿಕೆವಹಿಸಿದ್ದರು. ಇದೀಗ ಇವರ ಪರಿಕ್ಷಾ ವರದಿಯಲ್ಲಿ ಪಾಸಟಿವ್ ಬಂದಿದೆ ಎನ್ನಲಾಗುತ್ತಿದ್ದು, ಮಧ್ಯಾಹ್ನ ಹೆಲ್ತ ಬುಲೆಟಿನಲ್ಲಿ ದೃಡವಾಗಿದೆ. ಇದರ ಜೋತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ೨, ಮುರ್ಡೆಶ್ವರ ೧ ಕ್ವಾರಂಟೈನಲ್ಲಿ ಇರುವವರಿಗೆ ಕರೊನಾ ಪಾಸಟಿವ್ ದೃಡಪಟ್ಟಿದೆ,
ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ ತಾಲೂಕಿಗೆ ಸೀಮಿತವಾಗಿದ್ದ ಕರೋನಾ ಮುಂಬೈ ರತ್ನಗಿರಿ ಆಗಮಿಸಿದ ವ್ಯಕ್ತಿಯಿಂದ ಕುಮುಟಾ ತಾಲೂಕಿಗೆ ಬಂದಿತ್ತು. ಭಟ್ಕಳ ಕುಮುಟಾ ಮಧ್ಯೆ ಇರುವ ಹೊನ್ನಾವರದ ಜನತೆ ಆತಂಕದ ಮಧ್ಯೆ ತಮ್ಮ ದೈನಂದಿನ ವ್ಯವಹಾರದಲ್ಲಿ ತೊಡಗಿದ್ದರು. ಮೂರನೇ ಹಂತದ ಲಾಕ್ ಡೌನ್ ರವಿವಾರ ಅಂತ್ಯವಾದ ಬಳಿಕ ಸೋಮವಾರ ನಾಲ್ಕನೇ ಹಂತದ ಲಾಕ್ ಡೌನ್ ಪ್ರಥಮ ದಿನಕ್ಕೆ ಸಜ್ಜಾಗುತ್ತಿದ್ದರು. ಇದಕ್ಕೆ ಇವತ್ತಿನ ಹೆಲ್ತ ಬುಲೆಟಿನ್ ಬರೆ ಎಳೆದಂತಾಗಿದೆ.

About Post Author

error: