December 22, 2024

Bhavana Tv

Its Your Channel

ಬನವಾಸಿಯಲ್ಲಿ ಮುಖ್ಯಮಂತ್ರಿಗೆ ಭೇಟಿ; ಫೇ. 25 ರಂದು ಶಿರಸಿಯಿಂದ ಬನವಾಸಿ ಅರಣ್ಯವಾಸಿಗಳ ಮಹಾಸಂಗ್ರಾಮ ರ‍್ಯಾಲಿ.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ನಿರ್ಧಾರ ಪ್ರಕಟಿಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಆಗಮಿಸಿರುವ ಅರಣ್ಯವಾಸಿಗಳಿಂದ ಫೇಬ್ರವರಿ 25 ರಂದು ಶಿರಸಿಯಿಂದ ಬನವಾಸಿವರೆಗೆ ಅರಣ್ಯವಾಸಿಗಳ ಮಹಾಸಂಗ್ರಾಮ ರ‍್ಯಾಲಿ ಸಂಘಟಿಸಿ, ಬನವಾಸಿಯಲ್ಲಿ ಮುಖ್ಯಮಂತ್ರಿಗೆ ಭೇಟಿಯಾಗಿ, ಅರಣ್ಯವಾಸಿಗಳ ಪರ
ತುರ್ತು ಕ್ರಮ ಜರುಗಿಸುವಂತೆ ಅಗ್ರಹಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 17, 2022 ರಂದು ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿಜಾಥ ಸಂಘಟಿಸಿ, ಜನವರಿ 15, 2023 ರಂದು ಮುಖ್ಯಮಂತ್ರಿಗೆ ಶಿರಸಿಯಲ್ಲಿ ಮನವಿ ನಿಡಿದಾಗಿಯೂ ಹಾಗೂ ಫೇಬ್ರವರಿ 10, 2023 ರಂದು ಬೃಹತ್
ಸಂಖ್ಯೆಯ ಬೆಂಗಳೂರು ಚಲೋ ಜರುಗಿಸಿ ಸರಕಾರಕ್ಕೆ ಗಮನ ಹರಿಸುವಂತೆ ಅಗ್ರಹಿಸಿದಾಗಲೂ, ಸರಕಾರದ ಸ್ಪಷ್ಟ ನಿರ್ಧಾರ ಅರಣ್ಯವಾಸಿಗಳ ಪರವಾಗಿ ಬಾರದ ಹಿನ್ನೆಲೆಯಲ್ಲಿ ಫೇಬ್ರವರಿ 25 ರಂದು ಅರಣ್ಯವಾಸಿಗಳ ಮಹಾಸಂಗ್ರಾಮ ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ಫೇಬ್ರವರಿ 25, ಶನಿವಾರದಂದು ಶಿರಸಿಯ ಬಿಡ್ಕಿಬೈಲಿನ ಗಾಂಧಿ ಪ್ರತಿಮೆ ಏದುರು ಪ್ರಾರಂಭವಾಗಿ, ಬನವಾಸಿಯ ಮಧುಕೇಶ್ವರ ದೇವಸ್ಥಾನದವರೆಗೆ ಅರಣ್ಯವಾಸಿಗಳ ಮಹಾಸಂಗ್ರಾಮದ ರ‍್ಯಾಲಿ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಬೇಡಿಕೆಗಳು:
ಸುಫ್ರೀಂಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, 1978 ರ ಪೂರ್ವಕೇಂದ್ರಸರಕಾರದಿAದ ಮಂಜೂರಿಗೆ ಶಿಫಾರಸ್ಸು ಆಗಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಮುಂತಾದ ಹತ್ತು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಈ ಸಂಧರ್ಭದಲ್ಲಿನೀಡಲಾಗುವುದೆAದು ಅವರು ಹೇಳಿದರು.

error: