December 19, 2024

Bhavana Tv

Its Your Channel

ವಿಶ್ವಶಾಂತಿ ಟ್ರಸ್ಟ್ ಗೆ ನೂತನ ಅಧ್ಯಕ್ಷರಾಗಿ ರವೀಂದ್ರ ಭಟ್ ಆಯ್ಕೆ

ಶಿರಸಿ: ಕಳೆದ ಹಲವು ವರ್ಷಗಳಿಂದ ಕಲೆ, ಸಂಸ್ಕೃತಿ, ಕೃಷಿ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತಿತರ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ವಿಶ್ವಶಾAತಿ ಸೇವಾ ಟ್ರಸ್ಟ್ ಕರ್ನಾಟಕದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರವೀಂದ್ರ ಭಟ್ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ರವೀಂದ್ರ ಭಟ್ಟ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಹಿರಿಯ ಪತ್ರಕರ್ತರಾಗಿಯೂ ಹೆಸರು ಮಾಡಿದ ಅವರು ಪ್ರಸ್ತುತ ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದ ಜೊತೆ ಸಾಹಿತ್ಯ, ಕಲೆ, ಆರೋಗ್ಯ, ಗ್ರಾಮೀಣಾಭಿವೃದ್ಧಿಯಲ್ಲೂ ಅಪಾರ ಆಸಕ್ತಿ ಹೊಂದಿರುವದು ಅವರ ವಿಶೇಷವಾಗಿದೆ.
ಟ್ರಸ್ಟ್ ನ ಉಪಾಧ್ಯಕ್ಷರಾಗಿ ಚಿಂತಕ ರಮೇಶ ಹೆಗಡೆ ಹಳೆಕಾನಗೋಡ, ಕಾರ್ಯದರ್ಶಿಯಾಗಿ ಕವಯತ್ರಿ ಗಾಯತ್ರೀ ರಾಘವೇಂದ್ರ ಪುನರಾಯ್ಕೆಗೊಂಡಿದ್ದಾರೆ.
ನೂತನ ಕಾರ್ಯಕಾರಿ ಮಂಡಳಿಯಲ್ಲಿ ಹಿರಿಯ ಲೇಖಕಿ ಭುವನೇಶ್ವರಿ ಹೆಗಡೆ, ಕಲಾವಿದರಾದ ಕೇಶವ ಹೆಗಡೆ ಕೊಳಗಿ, ವಿನಾಯಕ ಜಿ. ಹೆಗಡೆ ಕಲ್ಗದ್ದೆ, ವೆಂಕಟೇಶ ನಾ.ಹೆಗಡೆ ಬೊಗ್ರಿಮಕ್ಕಿ, ಗೃಹಿಣಿ ಆರತಿ ಹೆಗಡೆ ಹುಳಗೋಳ, ಕೃಷಿಕರಾದ ರಾಘವೇಂದ್ರ ಎಸ್.ಹೆಗಡೆ, ನರೇಂದ್ರ ಎಸ್.ಹೆಗಡೆ, ಖಾಸಗಿ ಕಂಪನಿಯ ಉದ್ಯೋಗಸ್ಥರಾದ ಗುರುಪ್ರಸಾದ ಹೆಗಡೆ ಶಿಂಗನಮನೆ, ಗುರುಪ್ರಸಾದ ಭಟ್ಟ ಹಾರೆಹುಲೆಕಲ್ ಇರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

error: