December 20, 2024

Bhavana Tv

Its Your Channel

ಫೆ.24ಕ್ಕೆ ಪಾರ್ಥ ಸಾರಥ್ಯ ತಾಳಮದ್ದಲೆ

ಶಿರಸಿ: ಇಲ್ಲಿನ ಶಬರ ಸಂಸ್ಥೆಯು ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪಾರ್ಥ ಸಾರಥ್ಯ ತಾಳಮದ್ದಲೆ ಫೆ.24ರ ಸಂಜೆ 6ರಿಂದ ಭೈರುಂಬೆ ಸೊಸೈಟಿಯಲ್ಲಿ ನಡೆಯಲಿದೆ.
ಭಾಗವತರಾಗಿ ಕೃಷ್ಣ ಹೆಗಡೆ ಕನೇನಳ್ಳಿ, ಮದ್ದಲೆಯಲ್ಲಿ ನರಸಿಂಗಹ ಭಟ್ಟ ಹಂಡ್ರಮನೆ ಸಹಕಾರ ನೀಡಲಿದ್ದು, ಅರ್ಥಧಾರಿಗಳಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಅಶೋಕ ಭಟ್ಟ ಉಜಿರೆ, ಎಂ.ಎನ್. ಹೆಗಡೆ ಹಲವಳ್ಳಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಗೆಳೆಯರ ಬಳಗ ಭೈರುಂಬೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸುರೇಶ ಹಕ್ಕಿಮನೆ ಸಹಕಾರ ನೀಡಲಿದ್ದಾರೆ ಎಂದು ಶಬರ ಸಂಸ್ಥೆ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ತಿಳಿಸಿದ್ದಾರೆ.

error: