December 19, 2024

Bhavana Tv

Its Your Channel

ಅರಣ್ಯ ಸಿಬ್ಬಂದಿಗಳ ಅಮಾನುಷ್ಯ ಕೃತ್ಯ ; ಕಾನೂನು ಕೈಗೆತ್ತಿಕೊಂಡಿರುವುದು ಅಪರಾಧ- ರವೀಂದ್ರನಾಯ್ಕ.

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅತಿಕ್ರಮಿಸಿರುವ ಕ್ಷೇತ್ರದ ಅರ್ಜಿ ಉರ್ಜೀತ ಇರುವ ಸಂದರ್ಭದಲ್ಲಿ ಕಾನೂನಿನ ವಿಧಿ ವಿಧಾನ ಅನುಸರಿಸದೇ, ಏಕಾಎಕಿಯಾಗಿ ವಾಸ್ತವ್ಯದಲ್ಲಿರುವ ಮಹಿಳೆಯರನ್ನ ದೈಹಿಕ ಬಲಪ್ರಯೋಗ ಮತ್ತು ಒಕ್ಕಲೆಬ್ಬಿಸಿದ ರೀತಿ ಮತ್ತು ನೀತಿಯು ಅರಣ್ಯ ಸಿಬ್ಬಂದಿಗಳ ಕೃತ್ಯ ಅಮಾನುಷ್ಯ
ಹಾಗೂ ಖಂಡನಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ವಿಷಾದ ವ್ಯಕ್ತಪಡಿಸಿದ್ದರು.

ಅವರು ಇಂದು ಶಿರಸಿ ತಾಲೂಕಿನ, ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಹುಸರಿ ಗ್ರಾಮದ, ಸರ್ವೇ ನಂ 42 ರಲ್ಲಿ ಅರಣ್ಯ ಸಿಬ್ಬಂದಿಗಳು ನಿನ್ನೆ ಒಕ್ಕಲೆಬ್ಬಿಸಿದ ಸ್ಥಳಕ್ಕೆ ಇಂದು ಭೇಟ್ಟಿ ಕೊಟ್ಟು ಸಂದರ್ಭದಲ್ಲಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಭೂಮಿಯ ಕಬ್ಜಾ, ಭೋಗ್ವಟೆ, ಸ್ವಾಧೀನ ಕ್ಷೇತ್ರದಿಂದ ಗುಡಿಸಲು ದ್ವಂಸ ಗೊಳಿಸುವ ಸಂದರ್ಭದಲ್ಲಾಗಲೀ, ಅತಿಕ್ರಮಣ ಕ್ಷೇತ್ರದ ದಾಖಲೆಗಳನ್ನ ಪರಿಶೀಲಿಸದೇ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಬಲಪ್ರಯೋಗದ ಕೃತ್ಯದಿಂದ ಅತಿಕ್ರಮಣ ಕುಟುಂಬವು ಬೀದಿ ಪಾಲಾಗಿರುವುದು ಖೇದಕರ ಎಂದು
ಅವರು ಹೇಳಿದರು. ಕಾನೂನು ಕೈಗೆತ್ತಿಕೊಂಡು ಅರಣ್ಯ ಸಿಬ್ಬಂದಿಗಳು ಸ್ವಯಂಕೃತ ಅಪರಾಧ ವೆಸಗಿದ್ದಾರೆಂದು ಅವರು ಆಪಾದಿಸಿದ್ದಾರೆ.
ದಿನನಿತ್ಯ ಬಳಕೆಯ ಸಾಮಗ್ರಿಗಳನ್ನ ನೆಲಕ್ಕೆ ಚೆಲ್ಲಿ, ಕುಡಿಯುವ ನೀರಿನ ಬಾವಿಗೆ ಮಣ್ಣನ್ನು ತುಂಬಿ, ಅವಾಚ್ಯ ಶಬ್ದದಿಂದ ಅತಿಕ್ರಮಣದಾರರಿಗೆ ನಿಂದಿಸಿರುವ ಕ್ರಮ ಅಮಾನುಷ್ಯವಾಗಿದೆ ಎಂದು ರವೀಂದ್ರ ನಾಯ್ಕ ಸಿಬ್ಬಂದಿಗಳ ದುರ್ನಡತೆಯ ಬಗ್ಗೆ ಖಂಡಿಸಿದರು.
ಸರಕಾರದ ನಿಲುವಿಗೆ ವಿರುದ್ಧ ನಡೆ:
ಅರಣ್ಯ ಹಕ್ಕು ಕಾಯಿದೆ ಮತ್ತು ಸರಕಾರ ಅರಣ್ಯವಾಸಿಗಳಪರ ನಿಲುವು ಪ್ರಕಟಿಸಿದರು, ಜಿಲ್ಲೆಯಲ್ಲಿ ಪದೇ ಪದೇ ಅರಣ್ಯ ಸಿಬ್ಬಂದಿಗಳು ಕಾನೂನು ಮತ್ತು ಸರಕಾರದ ನಿಲುವಿಗೆ ವಿರುದ್ಧವಾಗಿ ಕಾರ್ಯ ಪ್ರವೃತ್ತರಾಗುತ್ತಿರುವ ಸೂಚನೆಯ ಸಂಗತಿ ಎಂದು ರವೀಂದ್ರನಾಯ್ಕ ಹೇಳಿದರು.

error: