
ಹೊನ್ನಾವರ : ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ “ಪೋಲ್ ವಾಲ್ಟ್ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ” ಪಡೆದು ವಿಶೇಷ ಸಾಧನೆಗೈದ, ಸರಕಾರಿ ಪ್ರೌಢಶಾಲೆ ಚಿತ್ತಾರದ ವಿದ್ಯಾರ್ಥಿನಿ ಕುಮಾರಿ ಚಿತ್ರಾಕ್ಷೀ ಮರಾಠಿ ಇವಳನ್ನು ಹೊನ್ನಾವರ ತಾಲೂಕಿನ ಚಿತ್ತಾರ ಪಂಚಾಯತದ ಅಡ್ಕೇಕುಳಿಯಲ್ಲಿ ಸನ್ಮಾನಿಸಲಾಯಿತು.
ಶ್ರೀ ವನದುರ್ಗಿ ಅಮ್ಮನವರ ಸೇವಾ ಸಮಿತಿ ಹಾಗೂ ಸ್ಥಳೀಯರು, ಕುಂಬ್ರಿ ಮರಾಠಿ ಸಮುದಾಯದ ಉತ್ತರಕನ್ನಡ ಜಿಲ್ಲಾ ಸಮಿತಿ ಮತ್ತು ಹೊನ್ನಾವರ ತಾಲೂಕಾ ಸಮಿತಿ, ಶಾಲಾ ಶಿಕ್ಷಕ ವೃಂದ ಮತ್ತು ಹಿತೈಷಿಗಳ ಸಹಯೋಗದಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಾಗೂ ಇದೇ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬೆಂಗಳೂರು ಇವರು ನಡೆಸುವ “ತಪಸ್” ಪರೀಕ್ಷೆಯಲ್ಲಿ ಆಯ್ಕೆಯಾದ ಕುಮಾರ್ ದೇವೇಂದ್ರ ಗೋವಿಂದ ಮರಾಠಿ ಇವರನ್ನು ಸಹ ಸನ್ಮಾನಿಸಲಾಯಿತು.
ಸನ್ಮಾನಿತ ವಿದ್ಯಾರ್ಥಿಗಳನ್ನು ಅಡ್ಕೇಕುಳಿ ಗ್ರಾಮದ ವಾದ್ಯವೃಂದದವರು ಮೆರವಣಿಗೆ ಮೂಲಕ ಮನೆಗೆ ತಲುಪಿಸಿ ಬಂದದ್ದು ವಿಶೇಷ ಹಾಗೂ ಅಪರೂಪದ ಸಂಗತಿಯಾಗಿತ್ತು.
ಈ ಸಭೆಯಲ್ಲಿ ಊರಿನ ಮುಖಂಡರಾದ ಬೋಮೂಡಾ ಮರಾಠಿ, ಶ್ರೀನಾಥ್ ಪುಜಾರಿ, ತಾಲೂಕಾಧ್ಯಕ್ಷ ರಮೇಶ್ ಮರಾಠಿ, ಗೌರವಾಧ್ಯಕ್ಷ ಗಿರಿಧರ ಮರಾಠಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರಾಠಿ, ದೈಹಿಕ ಶಿಕ್ಷಕ ಗೋಪಾಲ ಲಮಾಣಿ ಹಾಗೂ ಶಾಲಾ ಶಿಕ್ಷಕರು ಊರ ನಾಗರಿಕರು ಭಾಗಿಯಾಗಿದ್ದರು.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ