December 21, 2024

Bhavana Tv

Its Your Channel

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ “ಶತಮಾನೋತ್ಸವದ ಭವನ” ನಿರ್ಮಿಸಲು ಸಿ.ಎ ನಿವೇಶನ ಮಂಜೂರು ಮಾಡಲು ಮನವಿ

ವರದಿ: ವೇಣುಗೋಪಾಲ ಮದ್ಗುಣಿ

ಬೆಂಗಳೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಪದಾಧಿಕಾರಿಗಳು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ ಕರ್ನಾಟಕ ಸರ್ಕಾರ ಇವರನ್ನು ಎಚ್.ಎಸ್.ಆರ್ ಬಡಾವಣೆಯಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ಬೆಸ್ಕಾಂನ ನೂತನ ಕಟ್ಟಡ ಉದ್ಘಾಟನೆ ಮತ್ತು ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭೇಟಿ ಮಾಡಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ “ಶತಮಾನೋತ್ಸವದ ಭವನ” ನಿರ್ಮಿಸಲು ಸಿ.ಎ ನಿವೇಶನ ಮಂಜೂರು ಮಾಡಲು ಮನವಿ ಮಾಡಲಾಯಿತು. ಕೆ. ಚಂದ್ರಬಾಬು ಕೋಶಾದ್ಯಕ್ಷರು ಕೇಂದ್ರ ಸಮಿತಿರವರ ನೇತೃತ್ವದಲ್ಲಿ ಬಿ ಎಸ್ ಮೂರ್ತಿ, ಕೃಷ್ಣ ಪಿಣ್ಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಮುರುಳಿ ರೆಡ್ಡಿ ಹಿರಿಯ ಗುತ್ತಿಗೆದಾರರು ಹಾಗೂ ಬಿಜೆಪಿ ಮುಖಂಡರು,ಬೆAಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು
ಹಾಗು ಎಚ್ ಎಸ್ ಆರ್ ಕೊರಮಂಗಲ, ಅಧಿಕ ದಕ್ಷಿಣ ಸಮಿತಿಯ ಪದಾಧಿಕಾರಿಗಳು,ಸದಸ್ಯರುಗಳ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

error: