ಗುಂಡ್ಲುಪೇಟೆ:- ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪುರಾತನ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಲ್ಲಿ ಏಕಾದಶಿ ಹಿನ್ನಲೆ ನಡೆದ ಬ್ರಹ್ಮ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿoದ ನಡೆಯಿತು.
ಶ್ರೀ ಗೋಪಾಲಸ್ವಾಮಿ ರವರ ಬ್ರಹ್ಮರಥೋತ್ಸವ ಅಂಗವಾಗಿ ನಡೆಯುವ ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಜರಾಯಿ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಶುಕ್ರವಾರ ದಿಂದಲೇ ದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗಾರ ಮಾಡುವ ಮೂಲಕ ದೇವಸ್ಥಾನದ ಪ್ರಾಂಗಣದ ದಿಂದ ಗರ್ಭಗುಡಿ ವರೆಗೆ ಸಂಪೂರ್ಣವಾಗಿ ಹೂವಿನ ಅಲಂಕಾರ ಮಾಡಿದ್ದರು
ಮೊದಲಿಗೆ ಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿಟ್ಟು ಭಕ್ತಾಧಿಗಳು ಗೋಪಾಲ , ಗೋವಿಂದ ಎಂಬ ಜೈಕಾರ ದೊಂದಿಗೆ ಮಂಗಳವಾದ್ಯ ಹಾಗೂ ಕಲಾತಂಡಗಳೊAದಿಗೆ ದೇವಸ್ಥಾನ ಸುತ್ತ ಉತ್ಸವ ಮೂರ್ತಿಯನ್ನು ಭಕ್ತಾದಿಗಳು ಹೆಗಲ ಮೇಲೆ ಹೊತ್ತು ದೇವಸ್ಥಾನದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿಸುವ ಮೂಲಕ ಮೆರವಣಿಗೆ ಮಾಡಲಾಯಿತು .
ಮಧ್ಯಾಹ್ನ 12.30 ಘಂಟೆಯ ನಂತರ ಸಲ್ಲುವ ಶುಭ ಲಗ್ನದಲ್ಲಿ ಡೋಲಾಯಮಾನಂ ಗೋವಿಂದA ಮಂಚಸ್ಥA ಮಧುಸೂದನಂ ರರ್ಥಸ್ಥಂ ಕೇಶವಂ ದೃಷ್ಟ್ವ ಪುನರ್ಜನ್ಮನ ವಿದ್ಯತೇ ” ಎಂಬುದಾಗಿ ಅಪೂರ್ವ ವಾದ ಧ್ವಜ ಪತಾಕೆ ಗಳಿಂದ ಅಲಂಕೃತ ವಾದ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು.
ತಹಶೀಲ್ದಾರ್ ರಾದ ಮಲ್ಲಿಕಾರ್ಜುನ್ ಹಾಗೂ ಕ್ಷೇತ್ರದ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ರವರುಗಳು ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ತದನಂತರ ಭಕ್ತರ ಜೈಕಾರ ಮತ್ತು ಕರತಾಡನದ ನಡುವೆ ರಥೋತ್ಸವ ಸಾಗಿತು ನವ ದಂಪತಿಗಳು ಹಣ್ಣು ಧವನವನ್ನು ಎಸೆಯುವುದರ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ರಥೋತ್ಸವ ದೇವಸ್ಥಾನದ ಸುತ್ತಲೂ ಒಂದು ಬಾರಿ ಪ್ರದಕ್ಷಣೆ ಹಾಕಿ ದೇವಸ್ಥಾನ ಮುಂಭಾಗದ ಮೂಲಸ್ಥಾನದಲ್ಲಿ ಕೊನೆಗೊಂಡಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ.ವಿ.ಗೋಪಾಲಕೃಷ್ಣ ಭಟ್ಟರು ರಥೋತ್ಸವದ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ , ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಹೆಚ್.ಎಂ.ಗಣೇಶ್ ಪ್ರಸಾದ್ , ಕಾಡ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ , ಜಿಡಿಎಲ್ ಸುರೇಶ , ಪ್ರಣಯ್ ,ಸುರೇಶ್ ಕನ್ನೇಗಾಲ, ಸೇರಿದಂತೆ ಹಲವಾರು ಅಕ್ಕ ಪಕ್ಕದ ಗ್ರಾಮಸ್ಥರು ಭಕ್ತಾದಿಗಳು ಇದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.