December 22, 2024

Bhavana Tv

Its Your Channel

ಡಾ.ಬಿ.ಅರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಅರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯ ಮೂಲಕ ಸಾಗುವಳಿ ಚೀಟಿ ಹಾಗೂ 94 .ಸಿ. ಯಡಿಯಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಿತು .

ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಸಿ.ಎಸ್. ಕುಮಾರ್ ರವರು ತಾಲೂಕಿನ 162 ಮಂದಿ ಫಲಾನುಭವಿಗಳಿಗೆ (ರೈತರಿಗೆ) ಸಾಗುವಳಿ ಪತ್ರವನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.

ತದನಂತರ ಮಾತನಾಡಿದ ಶಾಸಕರು ನಮ್ಮ ಆಡಳಿತ ಅವಧಿಯಲ್ಲಿ ಪಕ್ಷಾತೀತವಾಗಿ ಸಾಗುವಳಿ ಪತ್ರವನ್ನು ವಿತರಿಸಲಾಗುತ್ತಿದ್ದು ಈಗಾಗಲೇ ತಾಲೂಕಿನಾದ್ಯಂತ ಸುಮಾರು 250 ಮಂದಿಗೆ ವಿತರಣೆ ಮಾಡಲಾಗಿದ್ದು , ಇಂದು ಎರಡನೇ ಹಂತದಲ್ಲಿ ಮತ್ತೆ 162 ಕೊಡಲಾಗುತ್ತಿದೆ , ಮುಂದಿನ ದಿನಗಳಲ್ಲಿ ಮತ್ತೆ ಉಳಿದವರಿಗೆ ಸಾಗುವಳಿ ಪತ್ರ ವಿತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಜಮೀನು ಬೇರೆ ಯವರಿಗೆ ಮಾರಾಟ ಮಾಡಬೇಡಿ ಇದರಿಂದ ಮುಂದಿನ ದಿನಗಳಲ್ಲಿ ರೈತರು ತೀರ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕ್ಷೇತ್ರದ ಶಾಸಕರು ಕಿವಿಮಾತು ಹೇಳಿದರು ,
ಕಾರ್ಯಕ್ರಮ ದಲ್ಲಿ ದರಕಾಸು ಕಮಿಟಿ ಸದಸ್ಯರು ಗಳಾದ ನಾಗರಾಜಪ್ಪ , ನಾಗಮಣಿ , ಹರಿಶ್ಚಂದ್ರ , ತಹಶಿಲ್ದಾರ್ ಜಯಪ್ರಕಾಶ್ , ಎಲ್.ಸುರೇಶ್ , ಎ.ಪಿ.ಎಂ.ಸಿ.ಸದಸ್ಯರು ಭಾಗ್ಯಮ್ಮ ರೈತಪಲಾನುಭವಿಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: