December 20, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಆದಿ ಜಾ0ಬವ ಸಮುದಾಯದ ಸಮಾವೇಶ

ಗುಂಡ್ಲುಪೇಟೆ ಪಟ್ಟಣದ ಬಸವೇಶ್ವರ ಕಮ್ಯೂನಿಟಿ ಹಾಲ್ನಲ್ಲಿ ನಡೆದ ಬೃಹತ್ ಆದಿ ಜಾ0ಬವ ಸಮುದಾಯ ಸಮಾವೇಶದಲ್ಲಿ ತಾಲೂಕಿನ 48 ಗ್ರಾಮಗಳಿಂದ ಬಂದಿದ್ದ ಆದಿ ಜಾ0ಬವ ಸಮುದಾಯದ ಮುಖಂಡರುಗಳನ್ನು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಎಮ್ ಗಣೇಶ್ ಪ್ರಸಾದ್ ಅವರು ಮಾತನಾಡಿ ಕಳೆದ ನಾಲ್ಕುವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ಧೋರಣೆಗಳನ್ನು ಖಂಡಿಸಿ ಜನರು ಬೇಸತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ. ಅಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು ಬರೀ ಬಿಜೆಪಿಯವರದು ಭರವಸೆ ಅಷ್ಟೇ ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗಲ್ಲ ಗ್ಯಾರಂಟಿ ನೀಡುವ ಪಕ್ಷ ನಮ್ಮದು ಎಂದು ಕಾಂಗ್ರೆಸ್ಸನ್ನ ಎಲ್ಲ ಸಮುದಾಯದವರು ಬೆಂಬಲಿಸಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಮಾಜಿ ಕಾಡ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ ಮಾತನಾಡಿ ಕಳೆದ ಎರಡು ತಿಂಗಳುಗಳಿAದ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ಗುದ್ದಲಿ ಪೂಜೆ ಮಾಡಿಕೊಂಡು ಬಂದಿದ್ದಾರೆ ಈ ಗುದ್ದಲಿ ಪೂಜೆ ಕೆಲಸವನ್ನ ಕಳೆದ ನಾಲ್ಕು ವರ್ಷದಿಂದ ಮಾಡಿದರೆ ಇಲ್ಲಿಯ ತನಕ ಕೆಲಸ ಸಂಪೂರ್ಣವಾಗಿ ಮುಗಿಯುತ್ತಿತ್ತು ಆದರೆ ತಾಲೂಕಿನ ಬಗ್ಗೆ ಮತ್ತು ತಾಲೂಕಿನ ಜನರ ಬಗ್ಗೆ ಕಾಳಜಿ ಇಲ್ಲ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ 50 ಕ್ಕೂ ಹೆಚ್ಚು ಮಂದಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ,ಧರ್ಮಸೇನಾ, ಚಾಮುಲ್ ನಿರ್ದೇಶಕರಾದ ನಂಜುAಡ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಬಿ ರಾಜಶೇಖರ್, ಹೆಚ್ ಎನ್ ಬಸವರಾಜು, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಕಬ್ಬಳ್ಳಿ ಮಹೇಶ್, ಎಸ್ ಆರ್ ರಾಜಣ್ಣ ,ಗಂಗಪ್ಪ ,ಜಯರಾಮ್ ಸೇರದಂತೆ ಪಕ್ಷದ ಇನ್ನೂ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಮತ್ತು ಆದಿ ಜಾ0ಬವ ಸಮುದಾಯದ ಯುವ ಮುಖಂಡರಾದ ಮಣಿಕಂಠ, ರಾಜೇಶ್, ನಾಗಯ್ಯ ನಾಗರಾಜು, ಹೊನ್ನ ಶೆಟ್ಟಿ ನರಸಿಂಹ ಸೇರಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಉಪಸ್ಥಿತರಿದ್ದರು.
ವರದಿ ; ಸದಾನಂದ ಕಣ್ಣೆಗಾಲ

error: