ಕುಮಟಾ: ಕುಮಟಾ & ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ, ಪಕ್ಷವು ಟಿಕೇಟ್‌ನನ್ನು ಬೇರೆ ಕ್ಷೇತ್ರದ ನಿವೇದಿತ್ ಆಳ್ವಾರಿಗೆ ನೀಡಿದ ಹಿನ್ನಲೆಯಲ್ಲಿ ಕಾರ್ಯಕರ್ತರ ಒತ್ತಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಕಣಕ್ಕೆ ದುಮುಕಿದ್ದಾರೆ.
ಕಾಂಗ್ರೆಸ್ ಟಿಕೇಟ್‌ನ ಮತ್ತೋರ್ವ ಪ್ರಭಲ ಆಕಾಂಕ್ಷಿಯಾಗಿದ್ದ ಮಾಜಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ, ಟಿಕೇಟ್ ಬೇರೆ ಕ್ಷೇತ್ರದ ಅಭ್ಯರ್ಥಿಗೆ ನೀಡಿರುವುದರಿಂದ ಪಕ್ಷದ ನಡೆಯನ್ನು ಖಂಡಿಸಿ, ಟಿಕೇಟ್ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆ ರಾಜೀನಾಮೆಯನ್ನು ಸಲ್ಲಿಸಿದರು. ಜೋತೆಗೆ ಪಕ್ಷೇತರರಾಗಿ ಕಣಕ್ಕೆ ಇಳಿದ್ದಿದ್ದು ಏಪ್ರೀಲ್ 20ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಪಕ್ಷೇತರರಾಗಿ ಸ್ವರ್ದಿಸಿದ್ದು ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಶಿವಾನಂದ ಹೆಗಡೆಯವರು ಜೋತೆಗೆ ಇದ್ದರು,
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಶಾರದಾ ಶೆಟ್ಟಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ತಪ್ಪಿಸಿ ಹೊರಗಿನವರಿಗೆ ನೀಡಿರುವುದು ಬೇಸರದ ಸಂಗತಿಯಾಗಿದೆ. ಪಕ್ಷವು ನನ್ನನ್ನು ಗುರುತಿಸದೆ ಇದ್ದರು ಪರವಾಗಿಲ್ಲ, ಆದರೆ ಕ್ಷೇತ್ರದ ಜನತೆ ಕೈ ಬಿಡುವುದಿಲ್ಲ ಎನ್ನುವುದು ಈಗ ನಾನು ನಿರ್ದಿಷ್ಟವಾದ ಹೆಜ್ಜೆಯನ್ನು ಇಟ್ಟಿದ್ದೇನೆ ಇದು ನನ್ನ ಗೆಲುವಿಗೆ ಕಾರಣವಾಗಲಿದೆ, ನನಗೆ ಮಾಜಿ ಜಿ.ಪಂ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಅವರು ಕೂಡಾ ನನಗೆ ಬೆಂಬಲವಾಗಿ ನಿಂತಿದ್ದಾರೆ,
ಇತ್ತು ಕಾರ್ಯಕರ್ತರಿಗೆ ತೀರಾ ಅನ್ಯಾಯವಾಗಿದೆ, ಕುಮಟಾ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಯನ್ನು ತಂದು ನಮ್ಮ ಮೇಲೆ ಹೇರಲು ಹೊರಟಿದೆ. ಸ್ವಾಭಿಮಾನಿ ಎಲ್ಲಾ ಕಾರ್ಯಕರ್ತರು ಒಂದಾಗಿದ್ದೇವೆ. ನಾನು ಕೂಡಾ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಆದರೆ ಸ್ಥಳೀಯ ಯಾವುದೇ ಅಭ್ಯರ್ಥಿಗೆ ಟಿಕೇಟ್ ನೀಡಿದ್ರೂ ಕೆಲಸ ಮಾಡುವ ಭರವಸೆಯನ್ನು ನೀಡಿದ್ದೆ. ಆದರೆ ಹೊರಗಿನ ಅಭ್ಯರ್ಥಿಗೆ ಟಿಕೇಟ್ ನೀಡುವುದು ಸರಿಯಾದ ಕ್ರಮವಲ್ಲ ಸ್ಥಳೀಯ ಅಭ್ಯರ್ಥಿಗೆ ಕೊಟ್ಟರೆ ಉತ್ತಮವಾಗಿತ್ತು ಎಂದು ಮಾಜಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಕಾಂಗ್ರೆಸ್ ಮಾಜಿ ತಾಲೂಕಾಧ್ಯಕ್ಷರಾದ ವಿ.ಎಲ್.ನಾಯ್ಕ, ಕಿಸಾನ್ ಕಾಂಗ್ರೆಸ್ ಮಾಜಿ ತಾಲೂಕಾಧ್ಯಕ್ಷರಾದ ಗಿರೀಶ ಪಟಗಾರ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷರಾದ ಸಂದೇಶ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷರಾದ ಮಧುಸೂಧನ್ ಶೇಟ್, ಮುಖಂಡರಾದ ರವಿಕುಮಾರಶೆಟ್ಟಿ, ಕಡತೋಕಾ ಗ್ರಾ.ಪಂ ಸದಸ್ಯರಾದ ರಾಮಚಂದ್ರ ನಾಯ್ಕ, ಹಳದೀಪುರ ಗ್ರಾ.ಪಂ ಸದಸ್ಯರಾದ ನವೀನ್ ನಾಯ್ಕ, ಗಿರೀಶ ಗೌಡ, ಪ್ರವೀಣ ನಾಯ್ಕ, ಸೇರಿದಂತೆ ಇತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ