May 19, 2024

Bhavana Tv

Its Your Channel

ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23

ಕುಮಟಾ: ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘ ಹಿರೇಗುತ್ತಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಗಮನಾರ್ಹವಾಗಿದೆ.

ಶಾಲೆಯ ಫಲಿತಾಂಶ ಶೇ. 94.23% ಆಗಿರುತ್ತದೆ. ಸುವರ್ಣ ಮಂಜುನಾಥ ಭಂಡಾರಕರ್ ಪ್ರಥಮ 91.52%, ದ್ವಿತೀಯ ರಕ್ಷಿತಾ ಸುರೇಶ ಗೌಡ 86.88, ತೃತೀಯ ದರ್ಶನ ಗಣಪತಿ ಹಳ್ಳೇರ 85.92% ಪಡೆದಿದ್ದು ಶಾಲೆಗೆ ಕೀರ್ತಿ ತಂದಿರುತ್ತಾರೆ. 104 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು ಅದರಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 11 ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾರೆ..

ಈ ಶೈಕ್ಷಣಿಕ ಸಾಧನೆಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್.ನಾಯಕ ಆಡಳಿತ ಕಮಿಟಿಯ ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ನಾಯಕ, ಕಾರ್ಯದರ್ಶಿ ಶ್ರೀ ಮೋಹನ ಬಿ ಕೆರೆಮನೆ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಶಾಂತಾ ಎನ್ ನಾಯಕ, ಶ್ರೀ ಮಹಾಲಸಾ ಸಿದ್ಧಿ ವಿನಾಯಕ ಟೆಂಪಲ್ ಟ್ರಸ್ಟ್ ಮಾದನಗೇರಿ ಧರ್ಮದರ್ಶಿಗಳಾದ ಶ್ರೀ ಸುನೀಲ್ ಪೈ, ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಎಸ್ ಗಾಂವಕರ ಹಾಗೂ ಶಿಕ್ಷಕ/ಶಿಕ್ಷಕೇತರ ವೃಂದದವರು ಹಾಗೂ ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರು/ ಸದಸ್ಯರು, ಊರನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಎನ್ ರಾಮು ಹಿರೇಗುತ್ತಿ

error: