December 22, 2024

Bhavana Tv

Its Your Channel

ಹಣತೆ ಬೆಳಕಿನಲ್ಲಿ ರಮ್ಜಾನ್ ಕವಿಗೋಷ್ಠಿ

ಕುಮಟಾ: ರಮ್ಜಾನ್ ಹಬ್ಬದ ನಿಮಿತ್ತ ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ
ಏ.೨೩ ರಂದು ಮಧ್ಯಾಹ್ನ ೩.೩೦ಕ್ಕೆ ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಹಣತೆ ಬೆಳಕಿನಲ್ಲಿ ರಮ್ಜಾನ್ ಕವಿಗೋಷ್ಠಿ ಹಮ್ಮಿಕೊಂಡಿದೆ.
ರೋಟರಿ ಕ್ಲಬ್ ಸಹಕಾರದಲ್ಲಿ ನಡೆಯುವ ಈ ಕವಿಗೋಷ್ಠಿಯನ್ನು ಹಣತೆ ಬೆಳಗುವುದರ ಮೂಲಕ ಹಿರಿಯ ಕವಿ ಡಾ. ಸೈಯ್ಯದ್ ಝಮೀರುಲ್ಲಾ ಷರೀಫ್ ಅವರು ಉದ್ಘಾಟಿಸಲಿದ್ದು, ಹಿರಿಯ ಕವಿ ಡಾ. ಎನ್.ಆರ್.ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯನುಡಿ ಆಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕುಮಟಾ ರೋಟರಿ ಕ್ಲಬ್ ಅಧ್ಯಕ್ಷ ಚೇತನ್ ಶೇಟ್ ಪಾಲ್ಗೊಳ್ಳಲಿದ್ದಾರೆ.
ರಮ್ಜಾನ್ ಕವಿಗೋಷ್ಠಿಯಲ್ಲಿ ಶೇಖ್ ಹುಸೇನ್ ಖಾಜಿ, ಬೀರಣ್ಣ ನಾಯಕ ಹಿರೇಗುತ್ತಿ, ಫಾಲ್ಗುಣ ಗೌಡ ಅಚವೆ, ಸಂದೇಶ ರತ್ನಪುರಿ ಮೈಸೂರು, ಗಣೇಶ ಜೋಶಿ, ಪ್ರವೀಣ ಹೆಗಡೆ, ನಾಗರಾಜ ಹೆಗಡೆ ಅಪಗಾಲ, ರವಿ ಕಾಯ್ಕಿಣಿ, ಪ್ರಶಾಂತ ಹೆಗಡೆ ಮೂಡಲಮನೆ, ಸುಧಾ ಭಂಡಾರಿ ಹಡಿನಬಾಳ, ಜ್ಯೋತಿ ಹೆಬ್ಬಾರ, ಸುನೇರಿ ಇಲಾಯಜ್, ರವೀಂದ್ರ ಭಟ್ ಸೂರಿ, ಅಕಿಲ್ ಖಾಜಿ, ಅನ್ಸಾರ್ ಶೇಖ್, ರೇಣುಕಾ ರಮಾನಂದ್, ಸುನಂದಾ ಭಂಡಾರಿ, ಅಬ್ದುಲ್ ರೆಹಮಾನ್, ನಾರಾಯಣ ಯಾಜಿ ಸಾಲೇಬೈಲು, ಅಂತೋನಿ ಡಿಸೋಜಾ, ಎಚ್.ಎಸ್.ಗುನಗ, ಮೋಹನ ಗೌಡ ಹೆಗ್ರೆ, ಡಾ. ಶ್ರಿಧರ ಗೌಡ ಉಪ್ಪಿನಗಣಪತಿ, ಉಷಾ ಕುಂಭೇಶ್ವರ, ಸ ಗಣಪತಿ ಹೆಗಡೆ ಕೊಂಡದಕುಳಿ, ಪ್ರಿಯಾ ಕಲ್ಲಬ್ಬೆ, ಅಷ್ಫಾಕ್ ಶೇಕ್, ರಾಘವೇಂದ್ರ ಹೊನ್ನಾವರ, ಅಭಿಷೇಕ್ ಬಿಜಾಪುರ, ಸಾತು ಗೌಡ ಬಡಗೇರಿ, ವನ್ನಳ್ಳಿ ಗಿರಿ, ಉದಯ ಮಡಿವಾಳ, ಕಮಲಾ ಕೊಂಡದಕುಳಿ, ಶಂಕರ ನಾಯ್ಕ ಶಿರಾಲಿ, ರೇಷ್ಮಾ ಉಮೇಶ್, ಸಂಗೀತಾ ನಾಯ್ಕ ಅಳ್ವೇಕೋಡಿ, ಸಂದ್ಯಾ ವಿನಾಯಕ್ ಅಘನಾಶಿನಿ, ಸಾವಿತ್ರಿ ನಾಯಕ ಮಾಸ್ಕೇರಿ, ಐ.ಎ.ಶೇಖ್, ಮೈಕಲ್ ಫರ್ನಾಂಡಿಸ್, ಸುರೇಶ್ ಭಟ್ ಮುಂತಾದವರು ಕವನ ವಾಚನ ಮಾಡಲಿದ್ದಾರೆ ಎಂದು ಹಣತೆ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: