ಕುಮಟಾ : ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿಸಿದ ಪರಮಪೂಜ್ಯ ಯುಗಯೋಗಿ ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾರ್ಶಿರ್ವಾದಗಳೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ 72ನೇ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಾನುಗ್ರಹದೊಂದಿಗೆ, ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀಯವರ ಮಾರ್ಗದರ್ಶನದೊಂದಿಗೆ ದಿನಾಂಕ 31-05-2023ರಂದು ನೂತನವಾಗಿ ಪ್ರಾರಂಭಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ, ಕುಮಟಾ, ಕೊಪ್ಪಳಕರವಾಡಿಯ ಪ್ರಾರಂಭೋತ್ಸವವನ್ನು ತುಂಬಾ ಸಡಗರದಿಂದ ಮಾಡಲಾಯಿತು.
ತಳಿರು ತೋರಣಗಳಿಂದ ವಿದ್ಯಾಲಯವನ್ನು ಅಲಂಕರಿಸಿ, ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕ ವೃಂದದವರು ಸಿಹಿವಿತರಿಸಿ, ತುಂಬಾ ಆದರದಿಂದ ಬರಮಾಡಿಕೊಂಡರು. ಮುಖ್ಯ ಶಿಕ್ಷಕಿ ನಿರ್ಮಲಾ ಪ್ರಭುರವರು ಮಕ್ಕಳ ಹಣೆಗೆ ತಿಲಕ ಹಚ್ಚಿ, ಮಕ್ಕಳಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಲೆಯ ಮಹತ್ವ ಮತ್ತು ಮಕ್ಕಳು ಶಾಲೆಯಲ್ಲಿ ಹೇಗಿರಬೇಕು, ಯಾವ ರೀತಿ ಶಿಸ್ತು ಪಾಲನೆ ಮಾಡಬೇಕು ಎಂಬ ಉಪಯುಕ್ತ ಮಾಹಿತಿ ನೀಡಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಆಶೀರ್ವದಿಸಿದರು.
ಶಿಕ್ಷಕಿ ಸುನೀತಾ ನರೋನಾರವರು ಮಕ್ಕಳಿಗೆ ಪುಷ್ಪಗುಚ್ಛ ನೀಡಿ ಸದಾ ನಗುನಗುತಾ ಇರಿ ಎಂದು ಶುಭಕೋರಿದರು. ಶಿಕ್ಷಕಿ ಮಹಾಲಕ್ಷ್ಮೀ ಹರಿಕಂತ್ರ, ಶಿಕ್ಷಕಿ ನಾಗವೇಣಿ ಮತ್ತು ಶಿಕ್ಷಕಿ ಶ್ವೇತಾ ಪಟಗಾರ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಕ್ಕಳೇ ಜ್ಯೋತಿ ಬೆಳಗಿಸಿ, ಭೈರವೈಕ್ಯ
ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಭೈರವಾಷ್ಟಕಂ ಶ್ಲೋಕ ಪಠಿಸಿ ಉದ್ಗಾಟಿಸಿರುವುದು ತುಂಬಾ ವಿಶೇಷವಾಗಿತ್ತು. ತದನಂತರ ಮಕ್ಕಳಿಗೆ ವಿವಿಧ ಚಟುವಟಿಕೆ, ಮನೋರಂಜನಾತ್ಮಕ ಆಟಗಳ ಮೂಲಕ ಅವರಲ್ಲಿ ಹೊಸ ಹುಮ್ಮಸ್ಸು, ಹುರುಪನ್ನು ಇಮ್ಮಡಿಗೊಳಿಸಿ, ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವ ವಾತವಾರಣ ಸೃಷ್ಟಿಸಿ ತುಂಬಾ ವೈಶಿಷ್ಟ್ಯಪೂರ್ಣವಾಗಿ, ಅದ್ಧೂರಿಯಾಗಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ