
ಮುರ್ಡೇಶ್ವರ ; ಆರ್.ಎನ್.ಎಸ್. ಸಂಸ್ಥೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಜೊತೆ ಕೈಗಾರಿಕಾ ವಿಭಾಗದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಮ್ಯಾಜಿಕ್ ಬಸ್ ಇಂಡಿಯಾ ಇದರ ಮ್ಯಾನೇಜರ್ ಕಲಾ ಪ್ರಕಾಶ ಮೆಚ್ಚುಗೆ ವ್ಯಕ್ತಪಡಿಸಿದರು.








ಅವರು ಮುರ್ಡೇಶ್ವರದ ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್.ಎನ್.ಶೆಟ್ಟಿ ಟ್ರಸ್ಟ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಪೌಂಡೇಶನ ಆಯೋಜಿಸಿದ ಜಾಬ್ ಪೇರ್ ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಆರೊಗ್ಯ ಕೈಗಾರಿಕೆ ಸೇರಿದಂತೆ ವಿವಿಧ ರಂಗದ ಮೂಲಕ ಸಾವಿರಾರು ಸಂಖ್ಯೆಯ ಯುವಕರಿಗೆ ಉದ್ಯೋಗ ನೀಡಿದ ಹೆಮ್ಮೆಯ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯ ಹಾಗೂ ಸುತ್ತಮುತ್ತಲೂ ಅಧ್ಯಯನ ಮಾಡುತ್ತಿದ್ದ ಯುವಕರು ಇಂದು ಸಂದರ್ಶನಕ್ಕೆ ಆಗಮಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಆರ್.ಎನ್.ಶೆಟ್ಟಿ ಸಂಸ್ಥೆಯ ಸಿ.ಇ.ಓ ಕರಣ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಆರ್.ಎನ್. ಸಂಸ್ಥೆಯ ಎಸ್ ಡಾ.ಸುಧೀರ್ ಪೈ, ಮಾತನಾಡಿ ಉದ್ಯೋಗ ಸಿಗದಿದ್ದರೆ ನಿರಾಶರಾಗಬೇಡಿ ಮುಂದಿನ ಪ್ರಯತ್ನಕ್ಕೆ ಇದು ಮುನ್ನಡಿಯಾಗಲಿದೆ. ಎಂದಿಗೂ ಹಣದ ಹಿಂದೆ ಹೊಗಬೇಡಿ ಅನುಭವದ ಹಿಂದೆ ಹೊದರೆ ಮುಂದೆ ವ್ಯಕ್ತಿ ಅನುಭವದಿಂದ ಹಣ ಬರಲಿದೆ ಎಂದು ಸಲಹೆ ನೀಡಿದರು.
ಮುರುಳಿಕೃಷ್ಣ ಮಾತನಾಡಿ ಸಮುದ್ರದಲ್ಲಿ ಹೇಗೆ ಅನಘ್ನ ರತ್ನ ಸಿಗಲಿದೆಯೋ ಹಾಗೆಯೇ ಇಂದು ನಡೆಯುವ ಸಂದರ್ಶನದಲ್ಲಿ ಅಂತಹ ವ್ಯಕ್ತಿಗಳು ಸಿಗಬಹುದು ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದರು.
ದಿನೇಶ ಗಾವಂಕರ್, ವೃತ್ತಿ ಗೌರವ ಬಹು ಮುಖ್ಯವಾಗಿದೆ. ವಿದ್ಯಾರ್ಥಿಗಳು ಇಂದೊAದು ಉತ್ತಮ ಅವಕಾಶ ಎಂದು ಅರಿತು ಇಲ್ಲಿ ಸಂದರ್ಶನಕ್ಕೆ ಹಾಜರಾಗಲು ಶುಭ ಹಾರೈಸಿದರು.
ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಸಂತೋಷ ಪದವಿ ಕಾಲೇಜಿನ ಪ್ರಾಚಾರ್ಯರಾದ ಸಂಜಯ್ ಕೆ.ಎಸ್. ಪಿಯು ಕಾಲೇಜಿನ ಪ್ರಾಂಶುಪಾಲರಾದ ಮಾಧವ ಪಿ, ಮ್ಯಾಜಿಕ ಬಸ್ ಇಂಡಿಯಾ ದಿನೇಶ, ವಿವಿಧ ಕಂಪನಿಯಿ0ದ ಆಗಮಿಸಿದ ಸಂದರ್ಶಕರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಪೂರ್ವದಲ್ಲಿ ರಕ್ಷಿತ ಕುಳಿಮನೆ ಇವರಿಂದ ಯಕ್ಷಗಾನ ನೃತ್ಯ ಪ್ರದರ್ಶನಗೊಂಡಿತು.
More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: