ಕುಮಟಾ ; ಪಟ್ಟಣದ ದೇವರಹಕ್ಕಲದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದಿವ್ಯ ಸಾನಿಧ್ಯ ವಹಿಸಿ ಭಕ್ತಾದಿಗಳನ್ನು ಹರಸುತ್ತಿರುವ ಚಂದಾವರ ಸೀಮೆಯ ಶ್ರೀ ಹನುಮಂತ ದೇವರಿಗೆ ಚಿನ್ನದ ಕಿರೀಟ ಧಾರಣಾ ಮಹೋತ್ಸವ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿAದ ನಡೆಯಿತು.
ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹಿತವಾದ ಸುಮಾರು ಅರವತ್ತು ಗ್ರಾಂ ಚಿನ್ನವನ್ನು ಹೊಂದಿರುವ, ವಿವಿಧ ಕೆತ್ತನೆಗಳಿಂದ ಕೂಡಿದ ಸುಂದರವಾದ ಚಿನ್ನದ ಕಿರೀಟ ಹಾಗೂ ಹಾರವನ್ನು, ಭಕ್ತಾದಿಗಳ ವತಿಯಿಂದ ದೇವಾಲಯದ ಮೊಕ್ತೇಸರರಾದ ಕೃಷ್ಣ ಬಾಬಾ ಪೈ ಅವರು ಶ್ರೀ ದೇವರಿಗೆ ಸಮರ್ಪಿಸಿದರು.
ಈ ಸಮಯದಲ್ಲಿ ಹಾಜರಿದ್ದ ಸಹಸ್ರಾರು ಭಕ್ತರು ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾದರು. ಭಕ್ತಾದಿಗಳು ಭಜನೆ, ಹನುಮನ ಕುರಿತಾದ ಜಯಘೋಷಗಳು, ರಾಮನ ಕುರಿತಾದ ಜಯಘೋಷಗಳ ಮೂಲಕ ಶ್ರೀ ಮಾರುತಿಗೆ ಚಿನ್ನದ ಕಿರೀಟ ಧಾರಣೆಯ ಸಂದರ್ಭವನ್ನು ಅಮೋಘವನ್ನಾಗಿಸಿದರು.
ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಸಾಗುವ ಭಜರಂಗಿ, ಚಿನ್ನದ ಕಿರೀಟದೊಂದಿಗೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ.
ಕಿರೀಟ ಧಾರಣೆಯ ಶುಭ ದಿನದಂದು, ಕುಮಟಾ ಪಟ್ಟಣದ ಖ್ಯಾತ ಉದ್ಯಮಿ “ವಾಸುದೇವ ಹನುಮಂತ ನಾಯಕ ಬೆಣ್ಣೆ” ಕುಟುಂಬದ ವತಿಯಿಂದ ಎಂಟು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ