December 22, 2024

Bhavana Tv

Its Your Channel

ರಾಮ ಮಂದಿರಕ್ಕೆ ಹನುಮ ನಾಡಿನ ಮೃತ್ತಿಕೆ!

ಕುಮಟಾ ; ಯುವಾ ಬ್ರಿಗೇಡ್ ಕುಮಟಾದ ಸದಸ್ಯರು ಪ್ರತಿ ವಾರ ಒಂದಿಲ್ಲ ಒಂದು ಸಮಾಜ ಸೇವೆಯನ್ನು ಮಾಡುತ್ತ ಬಂದಿದ್ದು ತನ್ನ ಸಾಮಾಜಿಕ ಸೇವಾ ಕಾರ್ಯದಲ್ಲಿ ತನ್ನದೇ ಆದ ಹೆಸರನ್ನ ಪಡೆದು ಕೊಂಡಿದೆ, ಅನೇಕ ಬಸ್ ಸ್ಟಾö್ಯಂಡ್ ಸಾರ್ವಜನಿಕ ಸ್ಥಳಗಳು ದೇವಾಲಯಗಳು ಹೀಗೆ ಹಲವು ಪ್ರದೇಶಗಳನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಚಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ಚಂದಾವರದ ಹನುಮಂತ ದೇವಸ್ಥಾನದ ಆವರಣವನ್ನು ಸ್ಚಚ್ಚಮಾಡಿ ಆವರಣ ವನ್ನು ನೀರಿನಿಂದ ತೊಳೆದು ನಂತರ ಅಲ್ಲಿಂದ ಮಣ್ಣನು ಸಂಗ್ರಹಿಸಲಾಯಿತು. ಈ ಮಣ್ಣನ್ನು ರಾಮ ಮಂದಿರ ಅಯೋಧ್ಯೆಗೆ ಕಳುಹಿಸಲಾಗುವದು ಎಂದು ಯುವ ಬ್ರಿಗೇಡ ಸದಸ್ಯರು ತಿಳಿಸಿದ್ದಾರೆ.
ಮುಂದಿನ ವಾರವು ಕುಮಟಾ ತಾಲೂಕಿನ ಬೇರೆ ಬೇರೆ ಕಡೆಯಲ್ಲಿ ಇರುವ ದೇವಾಲಯದ ಮಣ್ಣನು ಸಂಗ್ರಹಿಸಿ ರಾಮಮಂದಿರಕ್ಕೆ ಕಳುಹಿಸಲು ಯೋಚಿಸಲಾಗಿದೆ ಎಂದಿದ್ದಾರೆ.
ಪ್ರಮುಖವಾಗಿ ಹನುಮಾನ ದೇವಸ್ಥಾನ ಕಡೆಯ ಮಣ್ಣನ್ನು ಸಂಗ್ರಹಿಸುವ ಯೋಚನೆಯನ್ನು ಹೊಂದಿದ್ದಾರೆ. ಹನುಮಂತ ದೇವಸ್ತಾನ ಇರುವ À ಹಳ್ಳಿಯವರು ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಮುಂದಿನ ವಾರ ಅಲ್ಲಿ ಕೆಲಸವನ್ನು ಮಾಡಿ ಮಣ್ಣನ್ನು ಸಂಗ್ರಹಿಸಲಾಗುವದು ಅಲ್ಲದೆ ಉತ್ತರಕನ್ನಡಾದ್ಯಂತ ಹನುಮಾನ ದೇವಾಲಯದ ಮಣ್ಣನ್ನು ಸಂಗ್ರಹ ಮಾಡಲು ಯೋಚಿಸಲಾಗಿದೆ ಎಂದಿದ್ದಾರೆ.

error: