March 12, 2025

Bhavana Tv

Its Your Channel

ಗೃಹ ಜ್ಯೋತಿ ಎಪೆಕ್ಟ್ ಜನರಿಂದ ತುಂಬಿ ತುಳುಕುತ್ತಿರುವ ಹೊನ್ನಾವರ ಹೆಸ್ಕಾಂ ಕಚೇರಿ.

ಹೊನ್ನಾವರ ವಿದ್ಯುತ್ ಉಪವಿಭಾಗ ಕೇಂದ್ರಕ್ಕೆ ಗೃಹ ಜ್ಯೋತಿ ಸೌಲಭ್ಯ ಪಡೆಯಲು ತಾಲೂಕಿನ ವಿವಿಧ ಭಾಗದಿಂದ ಬಂದಿರುವ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಕೈಯಲ್ಲಿ ಒಂದಿಷ್ಟು ದಾಖಲೆ ಹಿಡಿದು ಓಡಾಡುತ್ತಿದ್ದಾರೆ. ಹೆಸ್ಕಾಂ ಕಚೇರಿ ಪೂರ್ತಿ ಜನರು, ಬೈಕು, ಕಾರು ಅಂತ ತುಂಬಿ ತುಳುಕುತ್ತಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ ಮಾಡಲು ಹಲವು ವಿಘ್ನಗಳ ನಿವಾರಣೆ ಆಗಬೇಕಿದೆ. ಆಗಬೇಕಿರುವ ಕೆಲಸಕ್ಕೆ ಹೆಸ್ಕಾಂ ಕಚೇರಿಗೆ ಸಾರ್ವಜನಿಕರು ಆಗಮಿಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ತಾಲೂಕಿನ ೨೬ ಗ್ರಾ.ಪಂ. ಮತ್ತು ಮಂಕಿ ಪಟ್ಟಣ ಪಂಚಾಯತ ಹಾಗೂ ಹೊನ್ನಾವರ ಪಟ್ಟಣ ಪಂಚಾಯತ ನಿವಾಸಿಗಳು ಆಯಾ ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಒನ್ ಮತ್ತು ಪಟ್ಟಣ ವ್ಯಾಪ್ತಿಯವರೆಗೆ ಕರ್ನಾಟಕ ಓನ್, ಸಿ.ಎಸ್.ಸಿ ಸೆಂಟರ್ ಮೂಲಕ ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ ಅರ್ಜಿ ಸಲ್ಲಕೆಗೆ ಮುನ್ನ ಫಲಾನುಭವಿಯ ಆರ್.ಆರ್.ಸಂಖ್ಯೆಗೆ ಆಧಾರ ನಂಬರ್ ಮತ್ತು ಮೊಬೈಲ್ ನಂಬರ್ ಜೋಡಣೆ ಹೆಚ್ಚಿನವರದು ಬಾಕಿ ಇದೆ. ನಲವತ್ತು, ಐವತ್ತು ವರ್ಷ ಕಳೆದರು ಮೃತ ಪಟ್ಟವರ ಹೆಸರಲ್ಲಿ ವಿದ್ಯುತ್ ಸಂಪರ್ಕವಿದೆ. ಅದರ ಬದಲಾವಣೆ ಹಾಗೂ ಹಳೆ ವಿದ್ಯುತ್ ಬಿಲ್ ಬಾಕಿ ತುಂಬಲು ಹೆಸ್ಕಾಂ ಗೆ ಜನ ಮುತ್ತಿಗೆ ಹಾಕುತ್ತಿದ್ದಾರೆ. ಇದರ ಹೊರತಾಗಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ಅರಿಯದ ಗ್ರಾಮೀಣ ಪ್ರದೇಶದ ಜನರು ಹೆಸ್ಕಾಂ ಗೆ ಬಂದು ಅಲ್ಲಿ ಇಲ್ಲಿ ಓಡಾಡುತ್ತಿದ್ದಾರೆ.

ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲ ಆಗುವಂತೆ ಮಾಡಿರುವ ವ್ಯವಸ್ಥೆ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಾದ ಲೋಕನಾಥನ್ ಮಾತನಾಡಿ ಗ್ರಹ ಜ್ಯೋತಿಗೆ ಸೇವಾ ಸಿಂದುವಿನ ಮೂಲಕ ಅರ್ಜಿ ಅವಕಾಶ ಮಾಡಿಕೊಡಲಾಗಿದೆ. ವಿದ್ಯುತ್ ಸಂಪರ್ಕ ಮೃತ ಪಟ್ಟವರ ಹೆಸರಿನಲ್ಲಿದ್ದವರು, ಆರ್ ಆರ್ ನಂಬರ್ ಗೆ ಆಧಾರ್ ಜೋಡಣೆ ಆಗದೆ ಇದ್ದವರು, ಬಿಲ್ ಬಾಕಿ ಇದ್ದವರು ಹೆಸ್ಕಾಂ ಗೆ ಬರುತ್ತಿರುವುದರಿಂದ ಜನ ದಟ್ಟಣೆ ಆಗಿದೆ. ಜನರ ಅನುಕೂಲಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಇಲಾಖೆ ಕಛೇರಿಯಲ್ಲಿಯೇ ಅರ್ಜಿ ಸಲ್ಲಿಸುವ ಅವಕಾಶ ಆಗಲಿದೆ ಎಂದರು.

error: