March 12, 2025

Bhavana Tv

Its Your Channel

ನ್ಯಾಯಾಲಯದ ಆವರಣದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ

ಹೊನ್ನಾವರ :- ಅಂತರಾಷ್ಟಿಯ ಯೋಗ ದಿನಾಚರಣೆಯ ಪ್ರಯುಕ್ತ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹೊನ್ನಾವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಮುಂಜಾನೆ ಯೋಗಾಸನ ಕಾರ್ಯಕ್ರಮ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಬಣಕಾರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಣ್ಣ ಹುಣಸೀಕಟ್ಟಿ, ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ, ಕೋರ್ಟ ಶಿರಸ್ತೆದಾರ ಗಣೇಶ ಪಟಗಾರ ಹಾಗೂ ಸಿಬ್ಬಂದಿಗಳು ಯೋಗ ತರಗತಿಯಲ್ಲಿ ಭಾಗವಹಿಸಿದ್ದರು.
ಯೋಗ ವಿದ್ಯಾರ್ಥಿ ಮಹೇಂದ್ರ ಗೌಡ ಹಾಗೂ ಪ್ರಜ್ವಲ್ ನಾಯ್ಕ ಯೋಗಾಸನಕ್ಕೆ ಮಾರ್ಗದರ್ಶನ ನೀಡಿದರು.

error: