
ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಅಂತರಾಷ್ಟೀಯಯೋಗ ದಿನವನ್ನು ಯೋಗಪಟುಗಳ ಮಾರ್ಗದರ್ಶನದಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಶಾಲಾ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಯೋಗಾಸನವನ್ನು ಮಾರ್ಗದರ್ಶಕರ ಸಹಕಾರದಿಂದ ಪ್ರದರ್ಶಿಸಿದರು. ಈ ಸಂದರ್ಭದಲಿ ್ಲಯೋಗದ ಮಹತ್ವದ ಕುರಿತು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಯಿತು.
ವಸಂತ ವಾಳ್ಕೆ, ಯೋಗತಜ್ಞರು ವಿದ್ಯಾರ್ಥಿಗಳಿಗೆ ಸರಳ ಯೋಗಾಸನಗಳನ್ನು ಶಿಸ್ತುಬದ್ಧವಾಗಿ, ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಉತ್ಸುಕತೆಯಿಂದಯೋಗಾಭ್ಯಾಸ ಮಾಡಿದರು. ಯೋಗ ದಿನಾಚರಣೆಯ ಕಾರ್ಯಕಲಾಪಗಳಲ್ಲಿ ಶಾಲಾ ಎನ್ ಸಿ ಸಿ ಮತ್ತು ಸ್ಕೌಟ್ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಯೋಗಪಟುಗಳನ್ನು ಶಿಕ್ಷಕ ಅಶೋಕ ನಾಯ್ಕ. ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಯೋಗದಿನಾಚರಣೆಯ ಯಶಸ್ಸಿಗೆ ಸಾಕ್ಷಿಯಾದರು.ಶಾಲಾ ಮುಖ್ಯಾಧ್ಯಾಪಕರಾz ಜಯಂತ ನಾಯಕ ಅವರ ಸºಕಾರ ಪಡೆದು ಶಾಲೆಯ ಎನ್ ಸಿ ಸಿ ಎ ಎನ್ ಓ ಶ್ರೀ ಎಲ್ ಜಿ ಭಟ್ಟ ,ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲೋಕೇಶ ಚಂದಾವರಕರ ಹಾಗೂ ಸ್ಕೌಟ್ ಮಾಸ್ಟರ್ ಶ್ರೀ ಯಶ್ವಂತ ಮೇಸ್ತ ಇವರು ಜಂಟಿಯಾಗಿ ವಿಶ್ವಯೋಗದಿನವನ್ನುಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಿದ್ದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ