May 3, 2024

Bhavana Tv

Its Your Channel

ಸಿ.ಜಿ.ಕೆ. ರಂಗ ಪುರಸ್ಕಾರಹಿರಿಯ ರಂಗಕರ್ಮಿ,ಪತ್ರಕರ್ತ ಜಿ.ಯು ಭಟ್ ರವರಿಗೆ

ಭಟ್ಕಳ ; ಬೀದಿನಾಟಕ ಅಕಾಡೆಮಿ ಬೆಂಗಳೂರು, ಸಂಗಾತಿ ರಂಗಭೂಮಿ ಅಂಕೋಲಾ, ಸಂಗಮ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಸಿ.ಜಿ.ಕೆ. ರಂಗ ಪುರಸ್ಕಾರ ಹೊನ್ನಾವರ ಪಟ್ಟಣದ ಎಸ್.ಡಿ.ಎಂ. ಕಾಲೇಜು ಆವರಣದಲ್ಲಿ ನಡೆಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಕರ್ಮಿ,ಪತ್ರಕರ್ತ ಜಿ.ಯು ಭಟ್ ಮಾತನಾಡಿ, ಜನರ ಪ್ರೀತಿ ಮುಂದೆ ಯಾವ ಪ್ರಶಸ್ತಿಯು ಇಲ್ಲ. ನಾಟಕದ ಮೂಲಕ ಜನರ ಪ್ರೀತಿ ಗಳಿಸಿದ್ದೇನೆ.ಎಸ್.ಡಿ.ಎಮ್ ಕಾಲೇಜಿನಲ್ಲಿ ನಿನಾಸಂ ನಾಟಕ ಪ್ರದರ್ಶನ ನೀಡುತ್ತಿದ್ದೆವು.ಇದರಿಂದ ಇಲ್ಲಿನ ಕಟ್ಟಡ ನಿರ್ಮಾಣಕ್ಕೂ ಸಹಾಯ ಹಸ್ತ ನೀಡಿದ್ದೇವು. ಅಂದು ಮಾಸ್ಟರ್ ಹಿರಣ್ಣಯ್ಯ,ಬಾಲಣ್ಣರವರ ಒಡನಾಟ ಸಿಕ್ಕಿತ್ತು ಎಂದು ತಮ್ಮ ರಂಗಭೂಮಿಯಲ್ಲ ಕಳೆದ ದಿನಗಳನ್ನು ಸ್ಮರಿಸಿದರು. ನಾವು ಮಾಡುವ ಕೆಲಸ ನಮಗೆ ಸಂತೋಷ ಕೊಡುವ ಜೊತೆಗೆ ಸಮಾಜಕ್ಕೂ ಒಳಿತನ್ನು ಮಾಡಬೇಕು. ಜನ ತೋರಿದ ಪ್ರೀತಿ, ವಿಶ್ವಾಸ ಜೀವನದ ಕೊನೆ ತನಕ ಇರುತ್ತದೆ ಎಂದರು.
ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದ ಸಹಕಾರ ಭಾರತೀ ಜಿಲ್ಲಾಧ್ಯಕ್ಷರು, ಸೇಫ್ ಸ್ಟಾರ್ ಮ್ಯಾನೇಜಿಂಗ್ ಡೈರೆಕ್ಟರ್ ಜಿ.ಜಿ.ಶಂಕರ ಮಾತನಾಡಿ ಜಿ.ಯು ಭಟ್ ಅವರು ಜಿಲ್ಲೆಯಲ್ಲಿ ಹೊಸ ರಂಗಭೂಮಿ ಕಟ್ಟಲು ನಿರ್ಮಾತೃರಾದವರು.ಇಂದು ಅವರಿಗೆ ಸಿ.ಜಿ.ಕೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿ ಮೌಲ್ಯ ಹೆಚ್ಚಿದೆ ಎಂದರು.ಜಿ. ಯು ಅವರು ಉತ್ತಮ ವಾಗ್ಮಿಗಳು. ತಮ್ಮ ಬದುಕನ್ನು ಅರ್ಪಣೆ ಮಾಡಿಕೊಂಡಿದ್ದಾರೆ. ತಮ್ಮ ಪತ್ರಿಕೋದ್ಯಮ ಅನುಭವ,ತಿಳುವಳಿಕೆಯನ್ನು ಸಮಾಜಕ್ಕೆ ತೆರೆದಿಟ್ಟವರು.ಅದಕ್ಕಾಗಿ ಇಂದು ಅವರನ್ನು ಪ್ರಶಸ್ತಿ ಅರಸಿ ಬಂದಿದೆ ಎಂದು ಅಭಿನಂದಿಸಿದರು.
ದೃಶ್ಯ ಮಾಧ್ಯಮ ಸಂಯೋಜಕರಾದ ಜಗದೀಶ ಭಾವೆ ಮಾತನಾಡಿ ಜಿಯುರವರ ನೋಡಿ ನಾನು ಕೂಡಾ ಪತ್ರಕರ್ತ ವೃತ್ತಿಗೆ ಬಂದಿದ್ದೇನೆ ಪತ್ರಕರ್ತರಾಗಿ ಈ ರಂಗಕ್ಕೆ ಗೌರವ ಭಾವನೆ ತಂದುಕೊಟ್ಟವರು.ಅನೇಕ ಯುವ ಪತ್ರಕರ್ತರಿಗೆ ಸಲಹೆ,ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಮ್.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಜಿಯುರವರು ತಾಲೂಕಿಗೆ ಮಾತ್ರವಲ್ಲ,ಜಿಲ್ಲೆಗೆ ಬೇಕಾದ ವ್ಯಕ್ತಿ,ಇಲ್ಲಿಯ ಕಥೆ-ವ್ಯಥೆ ತಿಳಿಸಿಕೊಟ್ಟವರು.ಜಿಲ್ಲೆಯ ಬಗ್ಗೆ ನಿರರ್ಗಳವಾಗಿ,ನಿರಂತರವಾಗಿ ಮಾತನಾಡಬಲ್ಲ ಏಕೈಕ ವ್ಯಕ್ತಿ. ವಿದ್ಯಾರ್ಥಿ ದೆಸೆಯಿಂದ ಕಲೆಯಲ್ಲಿ ಗುರುಗಿಸಿಕೊಂಡವರು.ಅವರ ಆದರ್ಶ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ.ಅವರ ಜ್ಞಾನ,ಶಕ್ತಿ, ಆದರ್ಶ ಇನ್ನೂ ಸಮಾಜಕ್ಕೆ ಬೇಕಿದೆ.ಇನ್ನಷ್ಟು ಪ್ರಶಸ್ತಿ ಸಿಗಲಿ.ಅವರ ಪ್ರಶಸ್ತಿ ನೋಡಿ ಆನಂದುಸೋಣ ಎಂದರು.
ರಂಗಕರ್ಮಿ ಕಿರಣಭಟ್ ರಂಗಭೂಮಿ ಕಲೆಯ ಕುರಿತು ಪ್ರಶಸ್ತಿ ವಿಜೇತರಾದ ಜಿ.ಯು.ಭಟ್ ಕುರಿತು ಅಭಿನಂದನಾ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾಗಿ ರವೀಂದ್ರ ಶೆಟ್ಟಿ, ಪೂಜಾರಾಣಿ, ಸ್ವಪ್ನಾ ಗಾವಂಕರ್ ಉಪಸ್ಥಿತರಿದ್ದರು.
ರಮೇಶ ಸ್ವಾಗತಿಸಿ, ತಿಮ್ಮಣ್ಣ ಭಟ್ ವಂದಿಸಿದರು. ಪ್ರಶಾಂತ ಮೂಡಲಮನೆ, ವಿದ್ಯಾಧರ ಕಡತೋಕಾ ಕಾರ್ಯಕ್ರಮ ನಿರ್ವಹಿಸಿದರು.

error: