
ಭಟ್ಕಳ: ತಾಲೂಕಿನ ಪ್ರತಿಷ್ಠಿತ ರಿಬ್ಕೋ ಸಂಸ್ಥೆಯ ಮಾಲೀಕನ ಮನೆ ಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ
ಆರೋಪಿಗಳನ್ನು ಮೊಹಮ್ಮದ ಸಾಧಿಕ್ ಅಲ್ಲಾಬಕ್ಷ ಹಾಗೂ ಮುಜಮ್ಮಿಲ್ ರಹಮತುಲ್ಲಾ ಶೇಖ ಎಂದು ಗುರುತಿಸಲಾಗಿದೆ.ಬಂಧಿತರಿAದ ಒಟ್ಟು ೧೨ ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇವರು ಕಳೆದ ಜೂನ್ ೨೧ ರಿಂದ ೨೨ ರಾತ್ರಿ ವೆಂಕಟಾಪುರದಲ್ಲಿರುವ ರಿಬ್ಕೋ ಸಂಸ್ಥೆಯ ಮಾಲೀಕನ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಕೋಣೆಯೊಳಗಿನ ಕಪಾಟನ ಒಳಗೆ ಇಟ್ಟಿದ್ದ ಲಾಕರ್ ಪೆಟ್ಟಗೆ ಒಡೆದು ಒಟ್ಟೂ ೧೪,೫೦,೦೦೦ ರೂಪಾಯಿ ನಗದು ಹಣ, ಬಂಗಾರದ ಆಭರಣ ವಿದೇಶಿ ಕರೆನ್ಸಿಗಳು ಹಾಗೂ ಒಂದು ವಾಚನ್ನು ಲಾಕರ್ ಸಮೇತ ಕಳುವು ಮಾಡಿಕೊಂಡು ಪರಾರಿಯಾಗಿದ್ದರು. ಬಳಿಕ ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. .ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆಕೈಗೊಂಡು ಆರೋಪಿಗಳನ್ನು ಜುಲೈ ೧೦ ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರ ಪತ್ತೆಯ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಉಪ ವರಿಷ್ಠ ಅಧಿಕಾರಿ ಸಿಟಿ ಜಯಕುಮಾರ್,ಡಿವೈಎಸ್ಪಿ ಶ್ರೀಕಾಂತ್, ಸಿ.ಪಿ.ಐ ಚಂದನ ಗೋಪಾಲ, ವಿ.ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ,
ಪಿ.ಎಸ್.ಐಗಳಾದ ಶ್ರೀಧರ ನಾಯ್ಕ, ಮಯೂರ ಪಟ್ಟಣಶೆಟ್ಟಿ ಅಪರಾಧ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ದೀಪಕ್ ನಾಯಕ, ವಿನಾಯಕ ಪಾಟೀಲ್, ಈರಣ್ಣಾ ಪೂಜಾರಿ, ನಿಂಗನಗೌಡ ಪಾಟೀಲ್ , ವಿನೋದ ಕುಮಾರ ಜ.ಬಿ, ಚಾಲಕ ಸಿಬ್ಬಂದಿ ದೇವರಾಜ ಮೊಗೇರ, ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳಾದ ಉದಯ ಗುನಗಾ , ರಮೇಶ ನಾಯ್ಕ ಕಾರಾಚರಣೆಯಲ್ಲಿ ಪಾಲ್ಗೊಂಡಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ