
ಭಟ್ಕಳ: ಪಟ್ಟಣದ ಪ್ರತಿಷ್ಠಿತ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದ ತಂಡ ಎಲ್ಲ ಸ್ಥಾನಗಳನ್ನೂ ಗೆದ್ದು ಭರ್ಜರಿ ಜಯಬೇರಿ ಬಾರಿಸಿದೆ. ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸಚಿವ ಮಂಕಾಳ ವೈದ್ಯ ಅತಿಹೆಚ್ಚು 608 ಮತವನ್ನು ಪಡೆದರೆ ನಂತರದ ಸ್ಥಾನವನ್ನು ಎನ್.ರಾಮಚಂದ್ರ ಕಿಣಿ 519, ಕೃಷ್ಣ ನಾಗಪ್ಪ ನಾಯ್ಕ 509, ಕೃಷ್ಣಾನಂದ ಪೈ 498, ಪರಮೇಶ್ವರ ಎನ್. ದೇವಾಡಿಗ 489, ಪರಮೇಶ್ವರ ಹೊನ್ನಪ್ಪ ನಾಯ್ಕ 482, ತಿಮ್ಮಪ್ಪ ನಾಯ್ಕ 463, ಮಹಿಳಾ ಕ್ಷೇತ್ರದಿಂದ ಗೀತಾ ನಾರಾಯಣ ನಾಯ್ಕ 528, ಲಕ್ಷ್ಮೀ ಮಾದೇವ ನಾಯ್ಕ 482, ಪರಿಶಿಷ್ಟ ಜಾತಿಯ ಕ್ಷೇತ್ರದಿಂದ ವೆಂಕಟರಮಣ ಮೊಗೇರ 506 ಮತ ಪಡೆದು ವಿಜಯಿಯಾದರು.
ಹಿಂದುಳಿದ ವರ್ಗ ಅ ಕ್ಷೇತ್ರದಿಂದ ನಾಗಪ್ಪ ಬೊಮ್ಮ ನಾಯ್ಕ, ಹಿಂದುಳಿದ ವರ್ಗ ಬ ಕ್ಷೇತ್ರದಿಂದ ಜಿ.ಪಂ. ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ಕ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಗೊಯ್ದ ಗೊಂಡ ಅವಿರೋಧ ಆಯ್ಕೆಯಾಗಿದ್ದರು. 10 ಸ್ಥಾನಕ್ಕೆ 15 ಮಂದಿ ಸ್ಪರ್ಧಿಸಿದ್ದು, ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರೇ ಚುನಾವಣೆಯಲ್ಲಿ ಮರು ಆಯ್ಕೆ ಆಗುವುದರ ಮೂಲಕ ಸಚಿವ ಮಂಕಾಳ ವೈದ್ಯರ ನೇತೃತ್ವದ ತಂಡ ಜಯಭೇರಿ ಬಾರಿಸಿದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ಕಾರವಾರದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸುಮನಾ ನಾಯ್ಕ ಕಾರ್ಯನಿರ್ವಹಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ