
ಹೊನ್ನಾವರ ಜಡ್ಡಿಕೇರಿಯಲ್ಲಿ ಮೇಯಲು ಹೋದ ೩ ಜಾನುವಾರುಗಳು ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ.
ಹೊನ್ನಾವರ ; ಪಟ್ಟಣದ ಜಡ್ಡಿಕೇರಿಯ ನಿವಾಸಿ ಮಂಜುನಾಥ ದಾಮೋದರ ನಾಯ್ಕ ಎನ್ನುವವರಿಗೆ ಸೇರಿದ ಒಂದು ಹಸು ಹಾಗೂ ಇನ್ನೊರ್ವ ಸ್ಥಳೀಯರಿಗೆ ಸೇರಿದ ಎಮ್ಮೆ ಹಾಗೂ ಎಮ್ಮೆಯ ಕರು ಮೃತಪಟ್ಟಿದೆ. ತುಂಡಾಗಿ ಬಿದ್ದ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಪೂರೈಕೆ ಇದ್ದಿದ್ದರಿಂದ ಜಾನುವಾರುಗಳಿಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಎರಡು ಎಮ್ಮೆ ಒಂದು ಹಸುವಿನ ಪ್ರಾಣಪಕ್ಷಿ ಹಾರಿ ಹೋಗುವಂತಾಗಿದೆ. ಸ್ಥಳೀಯರೊರ್ವರು ನೀಡಿದ ಮಾಹಿತಿ ಪ್ರಕಾರ ಇದು ಜನಸಂಚಾರವಿರುವ ಸ್ಥಳವಾಗಿದ್ದು, ಸನಿಹದಲ್ಲೇ ಕೂಲಿಕಾರ ಮಹಿಳೆಯರು ಗದ್ದೆನಾಟಿ ಕಾರ್ಯದಲ್ಲಿ ತೊಡಗಿದ್ದರು. ಅದ್ರಷ್ಟವಶಾತ್ ಈ ಸಂದರ್ಭದಲ್ಲಿ ಬಾರದಿದ್ದರಿಂದ ಸಂಚರಿಸುವ ಜನರ ಜೀವಕ್ಕು ಸಂಚಕಾರ ಬರುವುದು ತಪ್ಪಿದಂತಾಗಿದೆ. ಕೆಇಬಿಯವರು ತುಂಡಾದ ವಿದ್ಯುತ್ ಲೈನ್ ದುರಸ್ಥಿಗೊಳಿಸಿದ್ದು ಬಿಟ್ಟರೆ ಮೃತಪಟ್ಟ ಜಾನುವಾರು ಮಾಲೀಕರಿಗೆ ಮಾಹಿತಿ ನೀಡುವ ಕಾರ್ಯವು ಮಾಡಿಲ್ಲ ಎನ್ನಲಾಗಿದೆ. ಸ್ಥಳೀಯರು ಘಟನೆ ನೋಡಿ ಮೃತಪಟ್ಟ ಜಾನುವಾರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ