
ಕರ್ಕಿ: ಭಗವದ್ಗೀತಾ ಅಭಿಯಾನದ ಪ್ರಯುಕ್ತ ದಿನಾಂಕ: 1.12.2023 ರಂದು ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಭಗವದ್ಗೀತಾ ಶ್ಲೋಕ ಕೇಂದ್ರವನ್ನು ಉದ್ಘಾಟಿಸಲಾಯಿತು.
ಶ್ರೀಕೃಷ್ಣನ ಪೋಟೋ ಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖೇನ ಶ್ಲೋಕ ಕೇಂದ್ರವನ್ನು ಉದ್ಘಾಟಿಸಿದ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಲ್. ಎಮ್.ಹೆಗಡೆಯವರು ಮಾತನಾಡಿ ಭಗವದ್ಗೀತಾ ಹಿಂದೂಗಳ ಪವಿತ್ರ ಗ್ರಂಥ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಶ್ರೀ ಎಸ್.ಎನ್.ಹೆಗಡೆಯವರು ಉತ್ತಮ ಸಂಸ್ಕಾರಕ್ಕಾಗಿ ಭಗವದ್ಗೀತಾ ಶ್ಲೋಕಗಳು ಅತ್ಯವಶ್ಯಕ ಎಂದರು.ಶಾಲಾ ಸಂಸ್ಕತ ಶಿಕ್ಷಕರಾದ ಹಾಗೂ ಶ್ಲೋಕ ಕೇಂದ್ರದ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್ಟ ರವರು ಭಗವದ್ಗೀತೆಯ 10ನೇ ಅಧ್ಯಾಯದ ಮಹತ್ವವನ್ನು ತಿಳಿಸಿ ಶ್ಲೋಕಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ