April 27, 2024

Bhavana Tv

Its Your Channel

ಹೊನ್ನಾವರ ವಕೀಲರ ಸಂಘ, ವಕೀಲರ ದಿನಾಚರu

ಹೊನ್ನಾವರ: ವಕೀಲ ವೃತ್ತಿ ಅತ್ಯಂತ ಗೌರವದ ವೃತ್ತಿ. ವಕೀಲರನ್ನು ಕರೆಯುವಾಗ ರ‍್ರ್ನಡ್ ಅಡ್ವಕೇಟ್ ಎಂತಲೇ ಕರೆಯುತ್ತಾರೆ. ಸಮಾಜ ವಕೀಲರನ್ನು ಗೌರವದಿಂದ ಕಾಣುತ್ತÀದೆ. ಸಮಾಜದಲ್ಲಿ ಗೌರವ ನಂಬಿಕೆಯನ್ನು ಉಳಿಸಿಕೊಳ್ಳಲು ವಕೀಲರು ಸಹ ನಿತ್ಯವೂ ಅಪ್‌ಡೆಟ್ ಆಗಬೇಕು, ಜ್ಞಾನ ಸಂಪಾದನೆಯಲ್ಲಿ ತೊಡಗಿಕೊಂಡಿರಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಕಿರಿಯ ವಕೀಲರಿಗೆ ಕರೆ ನೀಡಿದರು.
ಅವರು ರವಿವಾರ ಹೊನ್ನಾವರ ವಕೀಲರ ಸಂಘ ವಕೀಲರ ದಿನಾಚರಣೆಯ ಪ್ರಯುಕ್ತ ಎರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘವು ನೀಡಿದ ಸನ್ಮಾನವನ್ನು ಸ್ವೀಕರಿಸಿ 50 ವರ್ಷ ವಕೀಲಿ ವೃತ್ತಿಯನ್ನು ಪೂರೈಸಿದ ಹಿರಿಯ ವಕೀಲ ಜಿ ವಿ. ಭಟ್ ಇವರನ್ನು ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಉತ್ತಮ ವಕೀಲನಾಗಲು ಕನಿಷ್ಟ ಆರಂಭದ 14 ವರ್ಷ ವನವಾಸದಂತೆ ಕಳೆಯಬೇಕು. ವೃತ್ತಿಯ ಬಗ್ಗೆ ಗೌರವವಿರಬೇಕು ಎಂದು ವಕೀಲರಿಗೆ ಕಿವಿಮಾತು ಹೇಳಿದರು.
ನಮ್ಮ ದೇಶದ ಲಿಖಿತ ಸಂವಿಧಾನ ನಮಗೆ ಉತ್ತಮ ನೆಮ್ಮದಿಯ ಬದುಕನ್ನು ನೀಡಿದೆ. ಸಂವಿಧಾನ ಶಿಲ್ಪಿ ಡಾ|| ಅಂಬೇಡ್ಕರ್ ಕೊಡುಗೆ ಅಪಾರವಾದದ್ದು. ದೇಶದ ತ್ರಿವರ್ಣ ಧ್ವಜ ದ ನಡುವೆ ಅಶೋಕ ಚಕ್ರವನ್ನು ಅಳವಡಿಸಲು ಅಂಬೇಡ್ಕರ್ ರವರ ಸಲಹೆಯನ್ನು ಸ್ವೀಕರಿಸಲಾಯಿತು. ತ್ಯಾಗ, ಪ್ರೀತಿ, ಬಲಿದಾನಗಳ ಸಂಕೇತವಾದ ಅಶೋಕ ಚಕ್ರ ನಮ್ಮ ರಾಷ್ಟç ಧ್ವಜವನ್ನು ಅಲಂಕರಿಸಿ ಬದುಕಿನ ದಿಕ್ಸೂಚಿಯಾಗಿದೆ. ನಮ್ಮೊಂದಿಗೆ ಸ್ವತಂತ್ರಗೊAಡ ಪಾಕಿಸ್ತಾನ, ಹತ್ತಿರದ ಬಾಂಗ್ಲಾದೇಶ, ಶ್ರೀಲಂಕಾ ಅರಾಜಕತೆಯನ್ನು ಎದುರಿಸುವಂತಾಗಿದೆ. ಆದರೆ ಗಟ್ಟಿ ಅಡಿಪಾಯದ ಸಂವಿಧಾನದ ಅಡಿಯಲ್ಲಿ ರೂಪುಗೊಂಡ ಕಾನೂನುಗಳಿಂದ ನಾವು ಉತ್ತಮ ಜೀವನವನ್ನು ನಡೆಸುವಂತಾಗಿದೆ. ದೇಶ ಪ್ರಗತಿಯಲ್ಲಿ ಸಾಗಿದೆ. ಸಂವಿಧಾನವನ್ನು ಗೌರವಿಸೋಣ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ. ಎಲ್ ಮಾತನಾಡಿ ವಕೀಲರು ಮತ್ತು ನ್ಯಾಯಾಧೀಶರು ರಥದ ಚಕ್ರಗಳಂತೆ ಸಮರ್ಪಣಾ ಭಾವದಿಂದ ವೃತ್ತಿಯಲ್ಲಿ ತೊಡಗಿಕೊಂಡ ವಕೀಲರಿಗೆ ವೃತ್ತಿ ಎಂದಿಗೂ ಕೈ ಬಿಡುವುದಿಲ್ಲ. ಅವರಿಗೂ ಅವರ ಕುಟುಂಬಕ್ಕೂ ಒಳಿತನ್ನು ಮಾಡುತ್ತದೆ. ಸಮಾಜಕ್ಕೂ ಒಳಿತು ಮಾಡುತ್ತದೆ. ಆದ್ದರಿಂದ ವಕೀಲರು ಅಧ್ಯಯನ ಶೀಲರಾಗಿ ವೃತ್ತಿಯಲ್ಲಿ ತತ್ಪರತೆಯನ್ನು ಕಾಣಬೇಕು ಎಂದರು.
50 ವರ್ಷಗಳ ಕಾಲ ವಕೀಲ ವೃತ್ತಿಯನ್ನು ನಡೆಸಿ ಬಂದ ಹಿರಿಯ ನ್ಯಾಯವಾಧಿ ಜಿ.ವಿ ಭಟ್ ಸನ್ಮಾನ ಸ್ವೀಕರಿಸಿ ಮಾತನಾಡಿ ತಮ್ಮ ಆರಂಭದ ವೃತ್ತಿ ಬದುಕಿಗೂ ಇಂದಿನ ವೃತ್ತಿ ಬದುಕಿನ ವಾಸ್ಥವವನ್ನು ವಿಶ್ಲೇಷಿಸಿದರು. ಕಿರಿಯ ವಕೀಲರಲ್ಲಿ ಅಧ್ಯಯನ ಶೀಲತೆ, ವೃತ್ತಿ ತತ್ಪರತೆ ಇನ್ನಷ್ಟು ಹೆಚ್ಚಬೇಕಾಗಿದೆ. ವೃತ್ತಿಯ ಕುರಿತು ಸಮಾಜ ನೀಡುತ್ತಿರುವ ಗೌರವವನ್ನು ಇನ್ನಷ್ಟು ದ್ವಿಗುಣಗೊಳಿಸಲು ಇನ್ನಷ್ಟು ಆಸಕ್ತಿಯನ್ನು ಯುವಕರು ವೃತ್ತಿಯಲ್ಲಿ ಬೆಳೆಸಿಕೊಳ್ಳಲಿ ಎಂದರು.
ವೇದಿಕೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಕುಮಾರ ಜಿ., ಪ್ರಧಾನ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಧೀಶ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ ಉಪಸ್ಥಿತರಿದ್ದರು. ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಕುರಿತು ವಕೀಲ ಜಿ ವಿ. ಭಟ್, ಸನ್ಮಾನಿತ ಜಿ ವಿ. ಭಟ್ ರವರ ಪರವಾಗಿ ವಕೀಲ ಎಮ್ ಎನ್ ಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡಿದರು. ಕೆ.ವಿ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಿ.ಕೆ ಹೆಗಡೆ ಹರಿಕೆರೆ ಹಾಗೂ ಗೋಪಾಲಕೃಷ್ಣ ಭಟ್, ಮಯೂರ ಹೆಗಡೆಯವರಿಂದ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಕೀಲ ನಾಗರಾಜ ಕಾಮತ್ ಸ್ವಾಗತಿಸಿದರು. ವಕೀಲ ಎಮ್. ಎಸ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಎಮ್. ಎನ್ ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು. ಮನೋಜ ಎಮ್ ಜಾಲಿಸತ್ಗಿ ವಂದಿಸಿದರು.

ಆಕಸ್ಮಿಕವಾಗಿ ವಕಾಲತ್ ಗೆ ಬರಬೇಡಿ. ಇಷ್ಟಪಟ್ಟು ವಕಾಲತ್ ಗೆ ಬನ್ನಿ. ಸತತ ಓದಿ. ಪುನಃ ಪುನಃ ಓದಿ. ಪ್ರಕರಣದ ವಸ್ತು ಸ್ಥಿತಿಯನ್ನು ಅರಿತುಕೊಳ್ಳಿ. ಪ್ರಕರಣಕ್ಕೆ ಪೂರಕವಾಗಿ ಉನ್ನತ ನ್ಯಾಯಾಲಯದ ತೀರ್ಪುಗಳನ್ನು ಹುಡುಕಿ. ಹಿರಿಯ ವಕೀಲರು ಕಚೇರಿಗೆ ಬರುವ ಮುನ್ನವೇ ಕಚೇರಿಯಲ್ಲಿ ಇರಿ. ಹಿರಿಯರು ನಡೆಸುವ ಪ್ರಕರಣವನ್ನು ಆಸಕ್ತಿಯಿಂದ ಕೇಳಿ. ನೈತಿಕತೆಯನ್ನು ಬೆಳೆಸಿಕೊಳ್ಳಿ. ಹಿರಿಯನ್ನು ಗೌರವಿಸಿ. ಕಿರಿಯನ್ನು ಪ್ರೀತಿಸಿ ಒಳ್ಲೆಯ ಆಹಾರ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ನೀವು ಮೊದಲು ಕಾನೂನು ಪರಿಪಾಲಿಸಿ. ನ್ಯಾಯಾಲಯದ ಎದುರು ವಾದ ಮಾಡಿ. ಪರಸ್ಪರ ಎದುರು ವಾಗ್ವಾದ ಮಾಡಿಕೊಳ್ಳಬೇಡಿ. ಮನಸ್ಸು ಮತ್ತು ವಾತಾವರಣ ಕೆಡದಂತೆ ಜಾಗೃತೆ ವಹಿಸಿ.
…………..ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ.

error: