June 20, 2024

Bhavana Tv

Its Your Channel

ಚಂಪಾಷಷ್ಠಿ ಉತ್ಸವ ನಿಮಿತ್ತ ಅಂಗಡಿ ಮುಂಗಟ್ಟು ಸ್ಥಳದ ಹರಾಜು ರದ್ದು

ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮುಗ್ವಾದಲ್ಲಿ 18-12-2023 ರಂದು ಚಂಪಾಷಷ್ಠಿ ಉತ್ಸವ ನಡೆಯಲಿದೆ, ಪ್ರತಿ ವರ್ಷವು ಉತ್ಸವಕ್ಕೆ ಅಂಗಡಿಯನ್ನು ಹಾಕಲು ಸ್ಥಳದ ಹರಾಜು ಪ್ರಕ್ರೀಯೆ ನಡೆಯುತ್ತಿತ್ತು ಆದರೆ ಈ ವರ್ಷ ಅಂಗಡಿ ಮುಂಗಟ್ಟು ಸ್ಥಳದ ಹರಾಜು ರದ್ದು ಪಡಿಸಿದಲಾಗಿದೆ.
ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀಡಲು ಸ್ಥಳದ ಅಭಾವ ಇರುವುದರಿಂದ ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠಿ ಉತ್ಸವದ ನಿಮಿತ್ತ ನಡೆಯುವ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕೀಯೆಯನ್ನು ರದ್ದು ಪಡಿಸಲಾಗಿದೆ. ದಯಮಾಡಿ ದೇವಾಲಯದ ಸ್ಥಳಗಳಲ್ಲಿ ಅಂಗಡಿಗಳನ್ನು ಹಾಕದಂತೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮುಗ್ವಾದ ಟ್ರಷ್ಟಿಗಳು ಹಾಗೂ ಸೇವಾಸಮಿತಿಯವರು ಮಾದ್ಯಮದ ಮೂಲಕ ವಿನಂತಿಸಿದ್ದಾರೆ.

error: