April 28, 2024

Bhavana Tv

Its Your Channel

ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮ

ಹೊನ್ನಾವರ ; ನಾಡಿನ ಪ್ರಸಿದ್ದ ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮ ಹೊನ್ನಾವರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸದರು. ನಂತರ ಜಿಎಸ್ ಬಿ ಸಮಾಜ,ನಾಮಧಾರಿ ಸಂಘ, ನಗರದ ಗಣ್ಯರು ಡಾ|ನರಸಿಂಹ ಪೈ ಅವರು ಕಳೆದ 25 ವರ್ಷಗಳಿಂದ ಹೃದಯ ಸೇವೆ ನೀಡುತ್ತ ಬೆಳ್ಳಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಯಕ್ಷಗಾನದ ಕೀರಿಟ ತೊಡಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸದ ಡಾ|ನರಸಿಂಹ ಪೈ ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಪ್ರೀತಿ ನೀಡಿದೆ, ನಾವು ಕಲಿತ ವಿದ್ಯೆ ನಮ್ಮವರಿಗೆ ಪ್ರಯೋಜನಕ್ಕೆ ಬಾರದಾದರೆ ಆ ವಿದ್ಯೆ ಕಲಿತು ಏನು ಪ್ರಯೋಜನ. ಅದಕ್ಕಾಗಿ ಇಲ್ಲಿಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಒರ್ವ ಬಡ ವ್ಯಕ್ತಿ ಒರ್ವ ಶ್ರೀಮಂತ ಅಥವಾ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಚಿಕತ್ಸೆ ದೃಷ್ಟಿಯಿಂದ ಎಲ್ಲರನ್ನು ಒಂದೇ ಸಮನಾಗಿ ನೋಡುತ್ತೇವೆ. ಸೇವೆ ನೀಡುವಾಗ ಯಾವುದೇ ಭೇದ-ಭಾವ ತೊರಬಾರದು ಎಂದರು.
ಇAದು ಕೃತಜ್ಞತೆ ಇಲ್ಲದ ಸಮಾಜದಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಶೆ.10 ಮಂದಿ ಮಾತ್ರ ವೈದ್ಯರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂತವರಿ0ದ ಇನ್ನಷ್ಟು ಉತ್ಸಾಹದಿಂದ ನಾವು ಶೆ.100 ಶ್ರಮ ಹಾಕಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.
ಹಿರಿಯ ಪತ್ರಕರ್ತ ಜೀಯು ಭಟ್ ಅಂಭಿನ0ದನಾ ನುಡಿಗಳನ್ನಾಡಿ, ಕಳೆದ 20 ವರ್ಷಗಳಿಂದ ಉತ್ತರ ಕನ್ನಡಕ್ಕೆ ಪ್ರತಿ ತಿಂಗಳು ಆಗಮಿಸಿ ಇಲ್ಲಿಯ ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೇ ಅಗತ್ಯವಿದ್ದವರಿಗೆ ಮಂಗಳೂರು ಕೆಎಮ್‌ಸಿಯಲ್ಲಿ ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಡಾ|ನರಸಿಂಹ ಪೈನವರು ಉಚಿತವಾಗಿ ಹೃದಯ ಚಿಕಿತ್ಸೆ ಮಾಡಿಕೊಡುತ್ತ ಬಂದಿದ್ದಾರೆ. ಎಲ್ಲ ಸಮಯದಲ್ಲೂ ರೋಗಿಗಳ ಕರೆಗೆ ಓಗೊಡುವ ಡಾ.ಪೈನವರು ಉನ್ನತವೈದ್ಯಕೀಯ ಅಭ್ಯಾಸಮಾಡಿದವರು. ಹೃದಯ ವೈದ್ಯರ ಸೇವೆ ಎಲ್ಲಾ ವೈದ್ಯರ ಸೇವೆಗಿಂತ ಕಠಿಣವಾದದು.ಆದರೆ ಡಾ||ನರಸಿಂಹ ಪೈನವರು ಅದನ್ನು ಸೂಕ್ಷ್ಮವಾಗಿ ಅಧ್ಯಯನದ ಜೊತೆಗೆ ಆತ್ಮಬಲದ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತಿಹೆಚ್ಚು ಹೃದಯ ರೋಗಿಗಳನ್ನು ಬದುಕಿಸಿದ ಕಿರ್ತಿ ಪೈ ನವರಿಗೆ ಸಲ್ಲುತ್ತದೆ ಎಂದರು.
ಡಾ.ಪೈನವರು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಸಾರ್ವಜನಿಕರೊಂದಿಗೆ,ಹೃದಯ ಸಮಸ್ಯೆಯುಳ್ಳವರೊಂದಿಗೆ ಸಂವಾದ ನಡೆಸಿದರು.
ವಾಣಿಜ್ಯ ತೆರಿಗೆ ಅಧಿಕಾರಿ ಗಣೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ,ಯಾವುದೇ ಶುಲ್ಕವಿಲ್ಲದೇ ಎಲ್ಲಾ ಜಾತಿ,ಧರ್ಮದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಾಮಧಾರಿ ಸಭಾಭವನದಲ್ಲಿ ಕಳೆದ ಆರು ತಿಂಗಳಿAದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರ ನಡೆಸುತ್ತಿದ್ದೇವೆ ಎಂದರು.
ಉಪನ್ಯಾಸಕ ಪ್ರಶಾಂತ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಡಾ.ಚಂದ್ರಶೇಖರ್ ಶೆಟ್ಟಿ,ಜಿಎಸ್ ಬಿ ಸಮಾಜದ ಗೌರವಾಧ್ಯಕ್ಷರಾದ ರಘುನಾಥ ಪ್ರಭು ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕ ಡಾ.ಪ್ರಕಾಶ ವಿ. ನಾಯ್ಕ ಸ್ವಾಗತಿಸಿದರು.ಯುವಜನ ಕ್ರೀಡಾಧಿಕಾರಿ ಸುಧೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು

error: