November 26, 2023

Bhavana Tv

Its Your Channel

ಹೊನ್ನಾವರ ಪಟ್ಟಣದ ಪೊಲೀಸ್ ಮೈದಾನದಲ್ಲಿ ಪ್ರತಿಷ್ಟಾಪಿಸಿದ ಗಣಪತಿ ಮೂರ್ತಿ ವಿಸರ್ಜನೆ ಶುಕ್ರವಾರ ರಾತ್ರಿ ಜರುಗಿತು.

  11 ದಿನಗಳ ಕಾಲ ಪೂಜೆಯ ಜೊತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಧಾರ್ಮಿಕ ಹಾಗೂ ಮನರಂಜನೆ ನೀಡಿದ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ವಿಸರ್ಜನಾ ಮೆರವಣೆಗೆಯು ಅರ್ಥಪೂರ್ಣವಾಗಿ ನೇರವೇರಿತು.   ಮೆರೆವಣೆಗೆಯಲ್ಲಿ ಡಿಜೆ ಬಳಸದೇ ಗುಂಡಬಾಳದವರ ಚಂಡೆ ವಾದನದೊಂದಿಗೆ   ಎಲ್ಲಾ ಸಿಬ್ಬಂದಿಗಳು ಸಂಪ್ರದಾಯಬದ್ದವಾದ ಬಟ್ಟೆ ಧರಿಸಿ ಕುಟುಂಬದ ಸದಸ್ಯರೊಂದಿಗೆ ಹೆಜ್ಜೆ ಹಾಕಿದರು. ಪ್ರಸುತ್ತ ವರ್ಷದ ತಾಲೂಕಿನ ಕೊನೆಯ ಸಾರ್ವಜನಿಕ ಗಣಪತಿ ವಿಸರ್ಜನೆ ಆಗಿರುದರಿಂದ ಇಲಾಖೆಯ ಸಿಬ್ಬಂದಿಗಳೊಡನೆ ಸಾರ್ವಜನಿಕರು ಹೆಜ್ಜೆ ಹಾಕಿದರು.

ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸೈ ಮಹಾಂತೇಶ ನಾಯಕ, ಸಾವಿತ್ರಿ ನಾಯ್ಕ, ಗಣೇಶ ನಾಯ್ಕ, ಮಮತಾ ನಾಯ್ಕ ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು

error: