
ಹೊನ್ನಾವರ ; ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ ಪದವಿ ಪೂರ್ವಮಹಾವಿದ್ಯಾಲಯದ ಹಾಗೂ ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ್ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ’ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- 2024’ಕಾರ್ಯಕ್ರಮನಡೆಯಿತು.

ಉದ್ಘಾಟಕರಾಗಿ ಆಗಮಿಸಿದ ಶ್ರೀಸುರೇಶ ನಾಯ್ಕ,ಕಾರ್ಯನಿರ್ವಾಹಕಾಧಿಕಾರಿಗಳು ಹೊನ್ನಾವರ ಇವರು ಮಾತನಾಡಿ ಚುನಾವಣೆಯಲ್ಲಿ ಒಂದೊAದು ಮತವೂ ಬೆಲೆಯುಳ್ಳದ್ದು ಮತದಾನದಿಂದ ವಂಚಿತರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ.ಜಿ.ಎಸ್.ನಾಯ್ಕ, ಕ್ಷೇತ್ರಶಿಕ್ಷಣಾಧಿಕಾರಿಗಳು ಹೊನ್ನಾವರ ಇವರು ಮಾತನಾಡಿವಿದ್ಯಾರ್ಥಿಗಳು ಮತಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿ ಕೊಂಡು ಮತದಾನ ಮಾಡುವ ಹಕ್ಕನ್ನು ಪಡೆಯಿರಿ ಎಂದರು.

ಪ್ರಾಚಾರ್ಯರಾದ ಶ್ರೀಎಂ.ಹೆಚ್.ಭಟ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀರಾಜೇಂದ್ರ ಪೆಡ್ನೆಕರ್ ಮತ್ತುರಾಜ್ಯಶಾಸ್ತ್ರಉಪನ್ಯಾಸಕರಾದ ವಿಶಾಲ ಎಸ್.ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸಕರಾದ ಎಂ.ಎನ್.ಅಡಿಗುAಡಿಯವರು ಸ್ವಾಗತಿಸಿದರು.ಇತಿಹಾಸ ಉಪನ್ಯಾಸಕರಾದ ಮಂಜುನಾಥ ಬಂಡಾರಿಯವರು ಕಾರ್ಯಕ್ರಮ ನಿರೂಪಿಸಿದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ