May 3, 2024

Bhavana Tv

Its Your Channel

ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನ ಸಮಾರಂಭ

ಹೊನ್ನಾವರ ; ಚಿಲುಮೆಯ ನೀರಿನಂತೆ ನಮ್ಮ ಜೀವನ ಹೊಳೆಯುವಂತಿರಬೇಕು, ಜ್ಞಾನ ಸಂಪಾದಿಸಿದಾಗ ಮಾತ್ರ ನಮ್ಮಲ್ಲಿ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಪಿ ಎನ್ ಶಾಸ್ತ್ರಿಯವರು ನುಡಿದರು.

ಇವರು ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಸನ್ಮಾನ ಸಮಾರಂಭದ ಉದ್ಘಾಟಕರಾಗಿ ಮಾತನಾಡುತ್ತಿದ್ದರು. ಸಂಸ್ಕೃತ ವಿಶ್ವ ಮಾನ್ಯ ಭಾಷೆಯಾಗಿದೆ. ಸಂಸ್ಕೃತ ಗ್ರಂಥದಲ್ಲಿರುವ ಅಪಾರಜ್ಞಾನವನ್ನು ವಿದೇಶಿಯರೂ ಸಹ ಪಡೆದುಕೊಳ್ಳುತ್ತಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಖ್ಯಾತ ಉದ್ಯಮಿ ಮಂಜುನಾಥ ಭಟ್ ಸ್ವರ್ಣಗದ್ದೆಯವರು ಮಾತನಾಡಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುನ್ನಡೆದರೆ ವಿದ್ಯಾ ಸಂಪನ್ನರಾಗಬಹುದು ಎಂದರು.
ಸಂಸ್ಥೆಯ ಅಧ್ಯಕ್ಷರಾದ ಉಮೇಶ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ ಪಿ ಎನ್ ಶಾಸ್ತ್ರಿ,ವೇದಮೂರ್ತಿ ವಿದ್ವಾನ್ ಶ್ರೀ ರಾಮ ಭಟ್ಟ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ಎಚ್ ಎಲ್ ಭಟ್ ಕರ್ಕಿಯವರನ್ನು ಸನ್ಮಾನಿಸಲಾಯಿತು.

ಆಡಳಿತಾಧಿಕಾರಿ ಎಂ ಎಸ್ ಹೆಗಡೆ ಗುಣವಂತೆ ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷರಾದ ವಿ ಜಿ ಹೆಗಡೆ ಗುಡ್ಗೆಯವರು ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ವಂದಿಸಿದರು.ಸAಗೀತ ಮತ್ತು ಅಶ್ವಿನಿ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: