December 20, 2024

Bhavana Tv

Its Your Channel

ಮನೆಗೆ ಆಕಸ್ಮಿಕವಾಗಿ ಬೆಂಕಿ

ಹೊನ್ನಾವರ: ಪಟ್ಟಣದ ಶಾಂತಿನಗರದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿಗೆ ಆಹುತಿ ಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಜ್ಯೋತಿ ಗೊನ್ಸಾಲ್ವಿಸ್ ಎನ್ನುವವರ ಮನೆಗೆ ಬೆಂಕಿ ತಗುಲಿ ಪಕ್ಕದಲ್ಲೇ ಇದ್ದ ಪಾವ್ಲು ಗೋನ್ಸಲ್ವಿಸ್ ಅವರ ಮನೆಯು ಬೆಂಕಿಗೆ ಆಹುತಿಯಾಗಿದೆ. ಸಾಯಂಕಾಲದ ವೇಳೆ ಮನೆಯಲ್ಲಿದ್ದ ಎಲ್ಲಾರು ಚರ್ಚ್ಗೆ ಪ್ರಾರ್ಥನೆಗೆ ಹೋದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಾರ್ವಜನಿಕರು ಹಾಗೂ ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ೨ ಮನೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

error: