December 24, 2024

Bhavana Tv

Its Your Channel

ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ

ಭಟ್ಕಳ : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಸಂಘದಿAದ ಭಟ್ಕಳದ ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಯೋಜಿಸಿದ್ದ ಮಾಹಿತಿ ಹಕ್ಕು ದಿನಾಚರಣೆ ಹಾಗೂ ಸಂಘನೆಯ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಈ ಸನ್ಮಾನ ನೀಡಿ ಗೌರವಿಸಿದೆ.

ಇವರು ಭಟ್ಕಳ ತಾಲೂಕಿನನಲ್ಲಿ ಪಂಚಾಯತ ಮಟ್ಟದಲ್ಲಿ ಹೋರಾಟ ಮಾಡಿ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುದನ್ನು ಗುರುತಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಸಂಘದಿAದ ಸನ್ಮಾನಿಸಿ ಗೌರವಿಸಿದೆ. ಇವರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾನು ಮಾಡಿದಂತ ಹೋರಾಟಗಳಿಗೆ ನನ್ನ ಜೊತೆ ಜೊತೆಯಾಗಿ ನಿಂತು ಸಹಕರಿಸಿದ ರಾಜ್ಯ ಸಂಘಟನೆಗೂ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಶಂಕರ ನಾಯ್ಕ ಮತ್ತು ತಾಲ್ಲೂಕು ಅಧ್ಯಕ್ಷರಾದ ನಾಗೇಂದ್ರ ನಾಯ್ಕ ಹಾಗೂ ಉಪಾಧ್ಯಕ್ಷರಾದ ವಸಂತ ದೇವಡಿಗ ಹಾಗೂ ಎಲ್ಲಾ ಪದಾಧಿಕಾರಿಗಳು ತುಂಬು ಹೃದಯದ ಧನ್ಯವಾದಗಳನ್ನು ನಾಗೇಶ ನಾಯ್ಕ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಉಪಸ್ಥಿತರಿದ್ದರು

error: