February 5, 2025

Bhavana Tv

Its Your Channel

ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ

ಭಟ್ಕಳ: ತಾಲೂಕ 11ನೆ ಸಾಹಿತ್ಯ ಸಮ್ಮೇಳನವು ಜನವರಿ 7ನೇ ತಾರೀಕಿನ ಮಂಗಳವಾರ ಅಳವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ.

ಸಾಹಿತಿ ನಾರಾಯಣ ಯಾಜಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಆ ದಿನ ಮುಂಜಾನೆ 8 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದ ಆವರಣದಲ್ಲಿ ಧ್ವಜಾರೋಹಣನಡೆಯಲಿದ್ದು ರಾಷ್ಟçಧ್ವಜಾರೋಹಣವನ್ನು ಶಿರಾಲಿ. ಗ್ರಾ.ಪಂ ಅಧ್ಯಕ್ಷ ಭಾಸ್ಕರ ಈಶ್ವರ ದೆÊಮನೆÀ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ, ಉ.ಕ. ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಲಿದ್ದಾರೆ. ಅಳ್ವೆಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ದೈಮನೆ, ದುರ್ಗಾ ಮೊಗೇರ ಮೀನುಗಾರರ ಅಸೋಸಿಯೇಶನ್‌ನ ಅಧ್ಯಕ್ಷ ಯಾದವ ಮೊಗೇರ, ಉದ್ದಿಮೆದಾರ ಬಾಬು ಮೊಗೇರ ಮುಂತಾದವರ ಗೌರವ ಉಪಸ್ಥಿತಿ ಇರಲಿದೆ. ಆ ನಂತರದಲ್ಲಿ ಅಳಿವೆಕೋಡಿ ಶ್ರಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಹಾಯಕ ಆಯುಕ್ತರಾದ ಡಾ. ನಯನಾ ಎಸ್. ಚಾಲನೆ ನೀಡಲಿದ್ದು ಗೌರವ ಉಪಸ್ಥಿತಿರಾಗಿ ಪೋಲೀಸ್ ಉಪಾಧೀಕ್ಷಕ ಮಹೇಶ ಎಂ.ಕೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ.ಬಿ., ಗ್ರಾಮಾಂತರ ಪೋಲೀಸ್ ವೃತ್ತ ನಿರೀಕ್ಷಕ ಚಂದನಗೋಪಾಲ, ವಲಯ ಅರಣ್ಯಾಧಿಕಾರಿ ಶ್ರೀ ವಿಶ್ವನಾಥ ವಿ.ವಿ.,ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಇರಲಿದ್ದಾರೆ.

ಸಮ್ಮೇಳನದ ಉದ್ಘಾಟನೆಯನ್ನು ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಶ ನಾಯಕ ಉದ್ಘಾಟಿಸಲಿದ್ದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ, ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ನುಡಿಗಳನ್ನಾಡಲಿದ್ದು, ದಿ|| ಮಾಸ್ತಿ ಸುಬ್ಬ ಹೊನ್ನಿಮನೆ ದ್ವಾರವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ದಿ|| ವೆಂಕಟ್ರಮಣ ಮಲ್ಲಜ್ಜ ಮೊಗೇರ ದ್ವಾರವನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದÉÊಮನೆ, ದಿ|| ತಿಮ್ಮಪ್ಪ ಗೋವಿಂದ ಪಕೀರನಮನೆ ದ್ವಾರವನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಅರವಿಂದ ಪೈ, ದಿ|| ಕುಪ್ಪ ದಾಸರ ದ್ವಾರವನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹನುಮಂತ ನಾಯ್ಕ, ದಿ|| ಎಮ್.ಬಿ. ನಾಯ್ಕ ದ್ವಾರವನ್ನು ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ, ದಿ|| ಮಂಜುನಾಥ ದೇವಾಡಿಗ ದ್ವಾರವನ್ನು ಸಾಹಿತಿ ಡಾ. ಆರ್.ವಿ. ಸರಾಫ್, ದಿ|| ಟಿ.ಬಿ. ಮಡಿವಾಳ ದ್ವಾರವನ್ನು ಸಾಹಿತಿ ಪಿ.ಆರ್.ನಾಯ್ಕ, ಚಿತ್ರಕಲಾ ಪ್ರದರ್ಶನವನ್ನು ತಹಸೀಲ್ಧಾರ ನಾಗೇಂದ್ರ ಕೋಳಶೆಟ್ಟಿ, ಪುಸ್ತಕ ಮಳಿಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ನಾಯಕ ಉದ್ಘಾಟಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾನಾಸುತ ಶಂಭು ಹೆಗಡೆ ಧ್ವಜ ಹಸ್ತಾಂತರಿಸಲಿದ್ದಾರೆ. ಉ.ಕ.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡಿಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಮ್.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಗೌರವ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ವಿಚಾರ ಗೋಷ್ಠಿ ನಡೆಯಲಿದ್ದು ಆರ್. ಎನ್. ಎಸ್. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ದಿನೇಶ ಗಾಂವಕರ್ ಅಧ್ಯಕ್ಷತೆ ವಹಿಸಲಿದ್ದು ಬೀನಾ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಪುಷ್ಪಲತಾ ಎಮ್.ಎಸ್ ಆಶಯ ನುಡಿಗಳನ್ನಾಡಲಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೆಗಳು ವಿಷಯದ ಕುರಿತು ಪತ್ರಕರ್ತ ಸತೀಶಕುಮಾರ ನಾಯ್ಕ, ಸಾಹಿತ್ಯದ ಓದು ಮತ್ತು ಯುವಜನತೆ ಎಂಬ ವಿಷಯದ ಕುರಿತು ನ್ಯೂ ಇಂಗ್ಲೀ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ಮಾತನಾಡಲಿದ್ದಾರೆ. ಪತ್ರಕರ್ತ ರಾಧಾಕ್ರಷ್ಣ ಭಟ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಶಿರೂರು, ಶ್ರೀವಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮಮತಾ ಭಟ್ಕಳರ ಗೌರವ ಉಪಸ್ಥಿತಿ ಇರಲಿದೆ.
3ಗಂಟೆಯಿAದ ಕವಿಗೋಷ್ಠಿ ನಡೆಯಲಿದ್ದು ಸಾಹಿತಿ ಶಂಕರ ನಾಯ್ಕ ಶಿರಾಲಿ ಅಧ್ಯಕ್ಷತೆ ವಹಿಸಲಿದ್ದು ಸಾಹಿತಿ ಆರ.ಎಸ್.ನಾಯಕ ಆಶಯ ನುಡಿಗಳನ್ನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ಕವಿಗಳಾದ ಮಂಜು.ಡಿ.ಪಕ್ಕಿ,ನೇತ್ರಾವತಿ ಆಚಾರ್ಯ, ಮಂಜುನಾಥ ಯಲ್ವಡಿಕವೂರ ಕೃಷ್ಣ ಮೊಗೇರ, ಅಳ್ವೆಕೋಡಿ ಚಂದ್ರಶೇಖರ ಪಡುವÀಣಿ ರಾಘವೇಂದ್ರ ಮಡಿವಾಳ ಉಮೇಶ ನಾಯ್ಕ, ಸರ್ಪನಕಟ್ಟೆ, ಸುಮಲತಾ ನಾಯ್ಕ, ಹೇಮಲತಾ ಶೇಟ್ ಜೈರಾಮ ಹೊಸಕಟ್ಟಾ, ಸತೀಶ ದೇವಾಡಿಗ, ವನಿತಾ ಎಚ್.,ರಶ್ಮಿ ಭಾಸ್ಕರ ನಾಯ್ಕ, ನಾಗರತ್ನ ನಾಯ್ಕ, ಶರಾವತಿ ಪಟಗಾರ, ವಿನೋದಾ ನಾಯ್ಕ ತೇಜ ಮೊಗೇರ ಕವನ ವಾಚಿಸಲಿದ್ದಾರೆ. 4ಗಂಟೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ನಡೆಯಲಿದ್ದು ಶ್ರೀಧರ ಶೇಟ್, ಶಿರಾಲಿ, ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ಮಾತನಾಡಲಿದ್ದಾರೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಶಿರಾಲಿಯ ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ.ಎಸ್. ಹೆಗಡೆ, ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ, ಗುರುಸುದೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀ ಶ್ರೀನಾಥ ಪೈ, ಕ್ಷೇತ್ರ ಸÀಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಮುಂತಾದವರರ ಗೌರವ ಉಪಸ್ಥಿತಿ ಇರಲಿದೆ. ಸಂಜೆ 5ಗಂಟೆಗೆ ಸಮಾರೋಪ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು ಕಸಾಪ ಉ.ಕ. ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ, ಸಾಹಿತಿ ಡಾ.ಸಯ್ಯದ ಝಮೀರುಲ್ಲ ಷರೀಫ್ ಸಮಾರೋಪ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುನೀಲ ಬಿ. ನಾಯ್ಕ, ಸಾಹಿತಿ ಪ್ರೇಮ ಟಿ.ಎಮ್.ಆರ್., ಉ.ಕ. ಜರ್ನಲಿಸ್ಟ ಯೂನಿಯನ್ ಜಿಲ್ಲಾಧ್ಯಕ್ಷ್ಷ ಮನಮೋಹನ ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ ಉಪಸ್ಥಿತರಿರಲಿದ್ದು ಪೆಟ್ರಿಕ ಟೆಲ್ಲಿಸ್ ಸಮ್ಮೇಳನದ ನಿರ್ಣಯ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತರದಿಂದ ಡಿ.ಎಮ್. ಮೊಗೇರ, ವಿ.ಡಿ. ಮೊಗೇರ, ಸಹಕಾರಿ ಕ್ಷೇತ್ರದಿಂದ ಈರಪ್ಪ ಗರ್ಡೀಕರ್, ಅಶೋಕ ಪÊ, ಸಮಾಜ ಸೇವೆಗಾಗಿ ರಮೇಶ ಶೆಟ್ಟಿ, ಇಸ್ಮಾಯಿಲ್ ಸವುದ್ ಗವಾಯಿ, ಜನಪದ ಕ್ಷೇತ್ರದಿಂದ ಈರಯ್ಯ ಮೊಗೇರ ಶಿಕ್ಷಣ ಕ್ಷೇತ್ರದಿಂದ ಅರ್ಚನಾ ಯು, ಮಾಧ್ಯಮ ಕ್ಷೇತ್ರದಿಂದ ವಿವೇಕ ಮಹಾಲೆ, ವೈದ್ಯಕೀಯ ಕ್ಷೇತ್ರದಿಂದ ಡಾ. ಲಕ್ಷಿö್ಮÃಶ ನಾಯ್ಕ ಪೌರಕಾರ್ಮಿಕ ಗಜೇಂದ್ರ ಶಂಕರ ಶಿರಾಲಿ ಸನ್ಮಾನಿತರಾಗಲಿದ್ದಾರೆ,
ಸನ್ಮಾನ್ಯ ಸಚಿವರಾದ ಮಂಕಾಳು ಎಸ್.ವೈದ್ಯರವರು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು ಅವರು ಸಚಿವರಾದ ನಂತರದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಎಲ್ಲ ಕನ್ನಡದ ಮನಸುಗಳು, ಸಾಹಿತಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗಂಗಾಧರ ನಾಯ್ಕ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕು ಘಟಕ. ಈ ಮೂಲಕ ಮನವಿ ಮಾಡಿದ್ದಾರೆ

error: