ಕುಮಟಾ: “ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳು. ದೈಹಿಕವಾಗಿ ಮಾನಸಿಕವಾಗಿ, ಸಾಮಾಜಿಕವಾಗಿ ಸ್ವಸ್ಥ ವಾಗಿರುವುದೇ ಆರೋಗ್ಯವಾಗಿದ್ದು ಎಲ್ಲ ವಿದ್ಯಾರ್ಥಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.ಆರೋಗ್ಯ ಸಂಬಂಧಿತ ಇಂತಹ ತರಭೇತಿ ಗಳು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ಉತ್ತಮ ಆರೋಗ್ಯ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಬೇಕು. ಮುಖಂಡತ್ವವನ್ನು ವಹಿಸಿಕೊಂಡು ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಲ್ಲಿ ಮುಂದಾಗಬೇಕು. ಚಟಗಳಿಗೆ ದಾಸರಾದರೆ ಬೇಗನೆ ಚಟ್ಟಕ್ಕೇರುತ್ತೆವೆ. ತಂಬಾಕು ಉತ್ಪನ್ನಗಳ ಕೆಟ್ಟ ಹವ್ಯಾಸಗಳಿಂದ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಇಂತಹ ಕೆಟ್ಟ ಹ್ಯವಾಸಗಳಿಂದ ದೂರ ಇರಬೇಕು” ಎಂದು ತಾಲೂಕಿನ ಹಿರಿಯ ಆರೋಗ್ಯ ಸಹಾಯಕ ಅಧಿಕಾರಿಗಳಾದ ದಿನೇಶ ನಾಯ್ಕ ಹೇಳಿದ್ದರು.
ಅವರು ಕುಮಟಾ ಡಾ ಏ.ವಿ.ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ ಏಡ್ಸ್ ನಿಂಯತ್ರಣ ಸೊಸೈಟಿ ಬೆಂಗಳೂರು, ಆರೋಗ್ಯ ಇಲಾಖೆ ಕಾರವಾರ, ಬಾಳಿಗಾ ಕಾಲೇಜಿನ ಎನ್.ಎಸ್.ಎಸ್ ಮತ್ತು ರೆಡ್ ರಿಬ್ಬನ್ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಹ ಶಿಕ್ಷಣಾರ್ಥಿಗಳ ತರಭೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ತರಭೇತಿಯನ್ನು ಚಾಲನೆ ಗೊಳಿಸಿ ಮಾತನಾಡಿದ ವಾಣಿಜ್ಯ ವಿಭಾಗದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಜಿ.ಹೆಗಡೆ “ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಯುವಕರಿಗೆ ಅರವಿನ ಅಗತ್ಯತೆ ಇದೆ.ಯುವ ಸಂಪನ್ಮೂಲ ಗುಣತ್ಮಾಕವಾಗಿರಬೇಕು ಹೊರತು ಸಂಖ್ಯೆ ದೃಷ್ಥಿಯಿಂದ ಹೆಚ್ಚಿದರೆ ಪ್ರಯೋಜನವಿಲ್ಲ.ಇವತ್ತಿನ ಜೀವನ ಶೈಲಿ ಇರಬಹುದು, ನಮ್ಮ ಹದಿಹರೆಯದ ನಡುವಳಿಕೆಗಳು ಇರಬಹುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್.ಐ.ವಿ/ಏಡ್ಸ್, ಮತ್ತು ರಕ್ತದಾನದ ಬಗ್ಗೆ ಇಂತಹ ತರಭೇತಿಗಳು ವಿದ್ಯಾರ್ಥಿಗಳಿಗೆ ಅಗತ್ಯ” ಎಂದು ಹೇಳಿದರು. ತರಭೇತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಶ್ರೀನಿವಾಸ್ ಶೇಣ್ವಿ “ಇಂತಹ ತರಭೇತಿಗಳು ಹದಿಹರೆಯದವರಲ್ಲಿ ಹೆಚ್.ಐ.ವಿ ತೊಂದರೆಗೆ ಸಿಲುಕದಂತೆ ಅರಿವು ಮೂಡಿಸುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಆಪ್ತಸಮಾಲೋಚಕರಾದ ಪ್ರದೀಪ್ ನಾಯ್ಕ, ವಿನಾಯಕ ಪಟಗಾರವರು ಹೆಚ್.ಐ.ವಿ/ಏಡ್ಸ್, ಕಳಂಕ ತಾರತಮ್ಯ, ರಕ್ತದಾನದ ಮಹತ್ವದ ಕುರಿತಂತೆ ವಿವಿಧ ಚಟುವಟಿಕೆ, ಪಿ.ಪಿ.ಟಿ ಪ್ರಜೆಂಟೆಶನ್ ಮೂಲಕ ತರಭೇತಿ ನೀಡಿದ್ದರು.ಕರಾವಳಿ ಪ್ರದೇಶದ ವಿವಿಧ ಪದವಿ ಕಾಲೇಜಿನಿಂದ ಪ್ರತಿ ಕಾಲೇಜಿನಿಂದ ಇಬ್ಬರಂತೆ ನಲ್ವತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳು ತರಭೇತಿಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ತೇಜಸ್ವನಿ ಹೆಗಡೆ ಸ್ವಾಗತಿಸಿದ್ದರು. ಕಾಲೇಜ್ ಎನ್ ಎಸ್.ಎಸ್ ಯೋಜನಾಧಿಕಾರಿ ಪ್ರೊ ಮುಸ್ತಾಪ್ ಸಾಬ್, ಪ್ರೊ ವಿ.ಡಿ.ಭಟ್ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮಾನಿಟರಿಂಗ್ & ಎವಾಲ್ಯುಎಶನ್ ಅಧಿಕಾರಿಗಳಾದ ಶ್ರೀಕಾಂತ ಹೀರೆಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರದೀಪ್ ಅಂಬಿಗ, ಕುಮಾರಿ ಶ್ರುತಿ ಭಟ್ಟ ,ಏಡ್ಸ್ ನಿಯಂತ್ರಣ ವಿಭಾಗದ ಸಿಬ್ಬಂಧಿಗಳಾದ ವಿನೋಧ ಉಪಸ್ಥಿತರಿದ್ದು ತರಬೇತಿ ಕಾರ್ಯಗಾರ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.