September 18, 2024

Bhavana Tv

Its Your Channel

ಗೊಕರ್ಣ ಜಾತ್ರೆಯಲ್ಲಿ ಹಚ್ಚೆ ಅಂಗಡಿ ಬಂದ್ ಮಾಡಿ ಆದೇಶ; ಅಂಗಡಿಗಳು ಸೀಜ್

ಗೋಕರ್ಣ: ಜಾತ್ರೆಯ ಸಮಯದಲ್ಲಿ ಹಚ್ಚೆ ಹಾಕುವುದನ್ನು (ಟ್ಯಾಟೂ) ನಿಷೇಧಿಸುವಂತೆ ಜಿಲ್ಲಾಧಿಕಾರಿಗಳ ಆದೇಶವಿದ್ದು, ಅದರಂತೆ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವದ ನಿಮಿತ್ತ ಇಲ್ಲಿನ ಟ್ಯಾಟೂ ಅಂಗಡಿಯನ್ನು ಬಂದ್ ಮಾಡುವಂತೆ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಆದೇಶಿಸಿ ಠರಾವು ಪಾಸ್ ಮಾಡಿದ್ದರು.
ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ನೀಡದೆ ಜಾತ್ರೆ ಪ್ರಾರಂಭವಾದರೂ ಅಂಗಡಿಗಳನ್ನು ತೆರೆದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಚಿಸಿದರೂ ಟ್ಯಾಟೂ ಹಾಕುವುದನ್ನು ಮುಂದುವರಿಸಿದ್ದರು. ಮಂಗಳವಾರ ತಾಲೂಕಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಟ್ಯಾಟೂ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿಯನ್ನು ಸೀಜ್ ಮಾಡಿದ್ದಾರೆ. ಮಾನವೀಯತೆಯಿಂದ ಹಲವು ಬಾರಿ ಜಾತ್ರಾ ಸಮಯದಲ್ಲಿ ಮಾತ್ರ ಮುಚ್ಚುವಂತೆ ಸೂಚಿಸಲಾಗಿತ್ತು ಇದು ಜಿಲ್ಲಾಧಿಕಾರಿಗಳ ಆದೇಶವಾಗಿದ್ದು, ಆದರೂ ಆದೇಶ ಉಲ್ಲಂಘನೆ ಮಾಡಿದ ಕಾರಣ ಅನಿವಾರ್ಯವಾಗಿ ಬೀಗ ಹಾಕಲಾಗಿದೆ.
ಜಾತ್ರೆ ಮುಗಿದ ಮೇಲೆ ಪರವಾನಿಗೆಯೊಂದಿಗೆ ಅಂಗಡಿ ತೆರೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಕೋಲಾ ಮತ್ತು ಕುಮಟಾ ಕರಾವಳಿ ಕಾವಲು ಪಡೆಯ ಸಿ.ಪಿ.ಐ.ಶ್ರೀಧರ, ಗೋಕರ್ಣ ಪಿ.ಎಸ್. ನವೀನ ನಾಯ್ಕ, ಬಂದೋವಸ್ತು ಏರ್ಪಡಿಸಿದ್ದರು. ತಾಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ ನಾಯ್ಕ, ಸಿಬ್ಬಂದಿಗಳಾದ ರಾಮಾ ಕೊಡ್ಲೆಕೆರೆ, ವಿನಾಯಕ, ಗ್ರಾಂ. ಪಂ. ಅಭಿವೃದ್ಧಿ ಅಧಿಕಾರಿ ಕಮಲಾ ಹರಿಕಂತ್ರ, ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ, ಗ್ರಾಂ. ಪಂ. ಸದಸ್ಯ ಗಣಪತಿ ಗೌಡ ಇತರೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದರು.
ಸಾರ್ವಜನಿಕರ ಪ್ರಶಂಸೆ: ಅನಧಿಕೃತ ಟ್ಯಾಟೂ ಅಂಗಡಿಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿದ್ದು, ಪ್ರವಾಸಿಗರ ಮೇಲೆ ಚೆಲ್ಲಾಟವಾಡುವ ಇಂತವರ ಮೇಲೆ ಕ್ರಮ ತೆಗದುಕೊಂಡ ಇಲಾಖೆಯ ಕಾರ್ಯ ಪ್ರಶಂಸನೀಯ, ಪರವಾನಿಗೆ ಇಲ್ಲದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

error: